ದಿಲ್ಲಿಗೆ ಹೊರಟ ಡಿಕೆಶಿ; ಖರ್ಗೆ ನೇತೃತ್ವದಲ್ಲಿ ಇಂದು ಮಹತ್ವದ ಸಭೆ: ಸಿದ್ದು ಡಿಕೆಶಿ ಭಾಗಿ

ದಿಲ್ಲಿಗೆ ಹೊರಟ ಡಿಕೆಶಿ; ಖರ್ಗೆ ನೇತೃತ್ವದಲ್ಲಿ ಇಂದು ಮಹತ್ವದ ಸಭೆ: ಸಿದ್ದು ಡಿಕೆಶಿ ಭಾಗಿ

ಬೆಂಗಳೂರು 
: ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಕುರಿತು ಮೊನ್ನೆ ಹಾಗೂ ನಿನ್ನೆ ಕಗ್ಗಂಟಾಗಿದ್ದ ಬಿಕ್ಕಟ್ಟು ಇಂದು ಬಗೆಹರಿಯುವ ನಿರೀಕ್ಷೆ ಇದೆ. ನಿನ್ನೆ ಆನಾರೋಗ್ಯದ ಕಾರಣ ದಿಲ್ಲಿ ಪ್ರವಾಸದಿಂದ ಹಿಂದುಳಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಇಂದು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ವಿಮಾನ ನಿಲ್ದಾಣದತ್ತ ಡಿಕೆಶಿ ಹೊರಟಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಅದರಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಭಾಗವಹಿಸಲಿದ್ದಾರೆ. ನಿನ್ನೆ ಡಿಕೆಶಿ ದೆಹಲಿಗೆ ಭೇಟಿ ನೀಡದ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಗಿತ್ತು.

Previous Post Next Post