ವಿಶ್ವ ಶಾಂತಿಗಾಗಿ ಕರೆ ನೀಡಿದ ಅರಫಾ ಖುತುಬ

ವಿಶ್ವ ಶಾಂತಿಗಾಗಿ ಕರೆ ನೀಡಿದ ಅರಫಾ ಖುತುಬಾ
ಅರಫಾ: ಅರಫಾ ಕುತುಬಾ ವಿಶ್ವಶಾಂತಿಗಾಗಿ ಕರೆ ನೀಡಿತು.  ಶೇಖ್ ಯೂಸುಫ್ ಬಿನ್ ಸಯೀದ್ ಅವರು ಪರಸ್ಪರ ಪ್ರೀತಿ ಮತ್ತು ಏಕತೆಗೆ ಪ್ರಾಮುಖ್ಯತೆಯನ್ನು ನೀಡುವಂತೆಯು ಮತ್ತು ಭಿನ್ನಾಭಿಪ್ರಾಯಗಳನ್ನು ಮರೆತು ಬಿಡುವಂತೆಯು ಎಂಟು ದಿಕ್ಕುಗಳಿಂದ ಹರಿದು ಬಂದ ಲಕ್ಷಾಂತರ ಹಜ್ಜಾಜ್ ಗಳೊಂದಿಗೆ ಕರೆ ನೀಡಿದರು.

ದೇಶ, ಭಾಷೆ ಮತ್ತು ಬಣ್ಣ, ವರ್ಣಗಳನ್ನು ಒಳಗೊಂಡಂತೆ ವೈವಿಧ್ಯತೆಯು ಈ ಜಗತ್ತಿನಲ್ಲಿ ಅಲ್ಲಾಹನ ಅದ್ಭುತಗಳಾಗಿವೆ. ವಿವಿಧ ಭಾಷೆಗಳು, ಬಣ್ಣಗಳು ಮತ್ತು ಜನಾಂಗಗಳ ವ್ಯತ್ಯಾಸಗಳು ಭಿನ್ನಭಿಪ್ರಾಯ ಮತ್ತು ಸಂಘರ್ಷಕ್ಕೆ ಯಾವುದೇ ಕಾರಣವಾಗಬಾರದು. ಸರ್ವಶಕ್ತನಾದ ಅಲ್ಲಾಹನ ಕಟ್ಟಳೆಗಳನ್ನು ಮತ್ತು ಆದೇಶಗಳನ್ನು ಪಾಲಿಸುವ ಮೂಲಕ ಇಹಪರ ವಿಜಯಗಳನ್ನು ಸಾಧಿಸುವ ಮುಅ್ ಮಿನುಗಳು ನಾವಾಗಬೇಕು ಎಂದು ಖುತ್ಬಾದಲ್ಲಿ ಇಮಾಮ್ ತಿಳಿಸಿದರು.


"ಓ ಜನರೇ, ನಿಮ್ಮ ಅಲ್ಲಾಹನು ಒಬ್ಬನೇ. ನಿಮ್ಮ ತಂದೆ ಒಬ್ಬನೇ. ಅರಬ್ಬಿಯು ಅರಬೇತರನಿಗಿಂತ ಶ್ರೇಷ್ಠನಲ್ಲ. ಓ ಜನರೇ, ನೀವು ಈ ನಾಡನ್ನು, ಈ ತಿಂಗಳು ಮತ್ತು ಈ ದಿನವನ್ನು ಗೌರವಿಸುವ ಪ್ರಕಾರ ಅಂತ್ಯ ದಿನದವರೇಗೂ ಅಲ್ಲಾಹನ ವಿಶ್ವಾವಸವನ್ನು ನೀವು ಕಾಯ್ದುಕೊಳ್ಳಬೇಕು ಎಂದು ಶೈಖ್ ಯೂಸುಫ್ ಬಿನ್ ಸಈದ್ ತಿಳಿಸಿದರು.

ತರ್ಕಗಳು ಎದುರು ಬಾರುವಾಗ ಪವಿತ್ರ ಖುರ್ ಆನ್ ಮತ್ತು ನೆಬಿ ಚರ್ಯೆಗಳಿಗೆ ನಾವು ಹಿಂತಿರುಗಬೇಕು. ಜನರನ್ನು ದಾರಿ ತಪ್ಪಿಸುವ ವದಂತಿಗಳಿಂದ ದೂರ ನಿಲ್ಲಲು ಇಸ್ಲಾಮ್ ಹೇಳಿದೆ ಎಂದು ಸತ್ಯದ ಪರ ಗಟ್ಟಿಯಾಗಿ ನೆಲೆಯೂರಬೇಕು ಮತ್ತು ಅಸತ್ಯದಿಂದ  ದೂರವಿರಬೇಕು ಎಂದು ಇಮಾಮ್ ತಿಳಿಸಿದರು. ಖುತುಬಾದ ಕೊನೆಯಲ್ಲಿ ಜಾಗತಿಕ ಜನರಿಗೆ ಬೇಕಾಗಿ ಪ್ರತ್ಯೇಕ ದುಆ ನಡೆಸಲಾಯಿತು.

ಕೃಪೆ: ಸಿರಾಜ್ ರಿಪೋರ್ಟ್ ನ ಕನ್ನಡೀಕರಣ
Previous Post Next Post