ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಬೆಂಗಳೂರು ದಕ್ಷಿಣ ತೃತೀಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಬೆಂಗಳೂರು ದಕ್ಷಿಣ ತೃತೀಯ


ರಾಜ್ಯದಲ್ಲಿ ಮಾರ್ಚ್ 1 ರಿಂದ ಮಾರ್ಚ್ 20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21 ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಇಂದು (ಏಪ್ರಿಲ್‌ 8) ಪತ್ರಿಕಾಗೋಷ್ಠಿ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.


ಹಾಗಾದ್ರೆ ಯಾವ ಜಿಲ್ಲೆಗೆ ಸ್ಥಾನ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ದ್ವಿತೀಯ ಪಿಯುಸಿ ಫಲಿತಾಂಶವನ್ನು 12.50ಕ್ಕೆ ಸರಿಯಾಗಿ ಪ್ರಕಟ ಮಾಡಿದರು. ವಿದ್ಯಾರ್ಥಿಗಳು www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲನೆ ಮಾಡಬಹುದು.

ಯಾವ ಜಿಲ್ಲೆ ಎಷ್ಟನೇ ಸ್ಥಾನ?: ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೇ ಸ್ಥಾನದಲ್ಲಿದೆ. 93.90 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆ 93.57 ಶೇಕಡಾ ಫಲಿತಾಂಶದ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದರೆ, ಯಾದಗಿರಿ ಜಿಲ್ಲೆ 48.45 ಶೇಕಡಾ ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಉತ್ತೀರ್ಣ ಫಲಿತಾಂಶ

* ಉಡುಪಿ - ಶೇಕಡ 93.90

* ದಕ್ಷಿಣ ಕನ್ನಡ - ಶೇಕಡ 93.57

* ಬೆಂಗಳೂರು ದಕ್ಷಿಣ - ಶೇಕಡ 85.36

* ಕೊಡಗು - ಶೇಕಡ 83.84

* ಬೆಂಗಳೂರು ಉತ್ತರ - ಶೇಕಡ 83.31

* ಉತ್ತರ ಕನ್ನಡ - ಶೇಕಡ 82.93

* ಶಿವಮೊಗ್ಗ - ಶೇಕಡ 79.91

* ಬೆಂಗಳೂರು ಗ್ರಾಮಾಂತರ - ಶೇಕಡ 79.70

* ಚಿಕ್ಕಮಗಳೂರು - ಶೇಕಡ 79.56

* ಹಾಸನ - ಶೇಕಡ 77.56

* ಚಿಕ್ಕಬಳ್ಳಾಪುರ - ಶೇಕಡ 75.80

* ಮೈಸೂರು - ಶೇಕಡ 74.30

* ಚಾಮರಾಜನಗರ - ಶೇಕಡ 73.97

* ಮಂಡ್ಯ - ಶೇಕಡ 73.27

* ಬಾಗಲಕೋಟೆ - ಶೇಕಡ 72.83

* ಕೋಲಾರ - ಶೇಕಡ 72.45

* ಧಾರವಾಡ - ಶೇಕಡ 72.32

* ತುಮಕೂರು - ಶೇಕಡ 72.02

* ರಾಮನಗರ - ಶೇಕಡ 69.71

* ದಾವಣಗೆರೆ - ಶೇಕಡ 69.45

* ಹಾವೇರಿ - ಶೇಕಡ 67.56

* ಬೀದರ್ - ಶೇಕಡ 67.31

* ಕೊಪ್ಪಳ - ಶೇಕಡ 67.20

* ಚಿಕ್ಕೋಡಿ - ಶೇಕಡ 66.76

* ಗದಗ - ಶೇಕಡ 66.64

* ಬೆಳಗಾವಿ - ಶೇಕಡ 65.37

* ಬಳ್ಳಾರಿ - ಶೇಕಡ 64.41

* ಚಿತ್ರದುರ್ಗ - ಶೇಕಡ 59.87

* ವಿಜಯಪುರ - ಶೇಕಡ 58.81

* ರಾಯಚೂರು - ಶೇಕಡ 58.75

* ಕಲಬುರಗಿ - ಶೇಕಡ 55.70

* ಯಾದಗಿರಿ - ಶೇಕಡ 48.45

Previous Post Next Post