ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶೇ.66.14ರಷ್ಟು ಫಲಿತಾಂಶ, ಬಾಲಕಿಯರದ್ದೇ ಮೇಲುಗೈ

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶೇ.66.14ರಷ್ಟು ಫಲಿತಾಂಶ, ಬಾಲಕಿಯರದ್ದೇ ಮೇಲುಗೈ 


ಬೆಂಗಳೂರು, ಮೇ 02: 2024-2025ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಈ ಬಾರಿ ಶೇ.66.14ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 74% ಹೆಣ್ಣುಮಕ್ಕಳು ಮತ್ತು 58.07% ಗಂಡು ಮಕ್ಕಳು ಉತ್ತೀರ್ಣ ಆಗಿದ್ದಾರೆ ಎಂದು ಹೇಳಿದ್ದಾರೆ.


ದಕ್ಷಿಣ ಕನ್ನಡ ಪ್ರಥಮ (91.12%) , ಉಡುಪಿ ದ್ವಿತೀಯ (89.96%) ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (83.19%) ತೃತೀಯ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಕರಾವಳಿ ಜಿಲ್ಲೆಗಳು ಕಿಂಗ್‌ ಎನಿಸಿಕೊಂಡಿದೆ. ಕಲಬುರಗಿಗೆ ಕೊನೆ ಸ್ಥಾನ (42.43 %) ಲಭಿಸಿದೆ. ಈ ಬಾರಿ 22 ಮಂದಿ 625 ಕ್ಕೆ 625 ಅಂಕ ಪಡೆದು ಸಾಧನೆ ಮಾಡಿ ಪ್ರಥಮರ‍್ಯಾಂಕ್ಪಡೆದಿದ್ದಾರೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು. ಮಧ್ಯಾಹ್ನ 12.30ರಿಂದ ವೆಬ್‌ಸೈಟ್‌ನಲ್ಲಿ (https://karresults.nic.in) ಫಲಿತಾಂಶ ಲಭ್ಯವಿದೆ.

ಈ ಬಾರಿ ಒಟ್ಟು 144 ಶಾಲೆಗಳಲ್ಲಿ ಶೇಕಾಡ 0% ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸರ್ಕಾರಿ ಶಾಲೆ - 6, ಅನುದಾನಿತ ಶಾಲೆ - 30, ಅನುದಾನ ರಹಿತ ಶಾಲೆ - 108 ಸೊನ್ನೆ ಫಲಿತಾಂಶ ಪಡೆದ ಶಾಲೆಗಳು. ಒಟ್ಟು 921 ಶಾಲೆಗಳಲ್ಲಿ ಶೇಕಾಡ 100 ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆ - 329, ಅನುದಾನಿತ ಶಾಲೆ - 53, ಅನುದಾನ ರಹಿತ ಶಾಲೆ - 530 ಔಟ್‌ ಆಫ್ ಔಟ್‌ ಫಲಿತಾಂಶ ಪಡೆದ ಶಾಲೆಗಳಾಗಿವೆ. ಶೇಕಾಡ 74.00 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾದರೆ, ಶೇಕಾಡ 58.07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 224900 (67.05%) ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸ್ . ಒಟ್ಟು 298175 (65.47%) ಗ್ರಾಮಾಂತರ ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.

ಯಾವ ಜಿಲ್ಲೆ ಎಷ್ಟು ಫಲಿತಾಂಶ?

1 ದಕ್ಷಿಣ ಕನ್ನಡ (Dakshina Kannada) 91.12%
2 ಉಡುಪಿ (Udupi) 89.96%
3 ಉತ್ತರ ಕನ್ನಡ (Uttara Kannada) 83.19%
4 ಶಿವಮೊಗ್ಗ (Shivamogga) 82.29%
5 ಕೊಡಗು (Kodagu) 82.21%
6 ಹಾಸನ (Hassan) 82.12%
7 ಶಿರಸಿ (Sirsi) 80.47%
8 ಚಿಕ್ಕಮಗಳೂರು (Chikkamagaluru) 77.9%
9 ಬೆಂಗಳೂರು ಗ್ರಾಮಾಂತರ (Bengaluru Rural)7 4.02%
10 ಬೆಂಗಳೂರು ದಕ್ಷಿಣ (Bengaluru South) 72.3%
11 ಬೆಂಗಳೂರು ಉತ್ತರ (Bengaluru North) 72.27%
12 ಮಂಡ್ಯ (Mandya) 69.27%
13 ಹಾವೇರಿ (Haveri) 69.03%
14 ಕೋಲಾರ (Kolar) 68.47%
15 ಮೈಸೂರು (Mysuru) 68.39%
16 ಬಾಗಲಕೋಟೆ (Bagalakote) 68.29%
17 ಗದಗ (Gadag) 67.72%
18 ಧಾರವಾಡ (Dharwad) 67.62%
19 ವಿಜಯನಗರ (Vijayanagara) 67.62%
20 ತುಮಕೂರು (Tumakuru) 67.03%
21 ದಾವಣಗೆರೆ (Davanagere) 66.09%
22 ಚಿಕ್ಕಬಳ್ಳಾಪುರ (Chikkaballapura) 63.64%
23 ಚಿತ್ರದುರ್ಗ (Chitradurga) 63.21%
24 ರಾಮನಗರ (Ramanagara) 63.12%
25 ಬೆಳಗಾವಿ (Belagavi) 62.16%
26 ಚಿಕ್ಕೋಡಿ (Chikkodi) 62.12%
27 ಚಾಮರಾಜನಗರ (Chamarajanagara) 61.45%
28 ಮಧುಗಿರಿ (Madhugiri) 60.65%
29 ಬಳ್ಳಾರಿ (Ballari) 60.26%
30 ಕೊಪ್ಪಳ (Koppala) 57.32%
31 ಬಿದರ್ (Bidar) 53.25%
32 ರಾಯಚೂರು (Raichur) 52.05%
33 ಯಾದಗಿರಿ (Yadgiri) 51.6%
34 ವಿಜಯಪುರ (Vijayapura) 49.58%
35 ಕಲಬುರಗಿ (Kalaburagi) 42.43%

ಮಾ.21ರಿಂದ ಏ.4ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಟ್ಟು 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಏ.11ರಿಂದ ರಾಜ್ಯಾದ್ಯಂತ ನೂರಾರು ಕೇಂದ್ರಗಳಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಆರೂ ವಿಷಯಗಳಿಗೆ ಸೇರಿದ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿತ್ತು. ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್‌ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚುವರಿ ಗ್ರೇಸ್‌ ಅಂಕ ನೀಡಿದ್ದರೂ ಶೇ.10ರಷ್ಟು ಫಲಿತಾಂಶ ಕುಸಿತ ಕಂಡಿತ್ತು. ಈ ಬಾರಿ 8% ಉತ್ತಮ ಫಲಿತಾಂಶ ಬಂದಿದೆ.

Previous Post Next Post