ರಾಜ್ಯಕ್ಕೆ ಗುಡ್ ನ್ಯೂಸ್: ಇಳಿಕೆ ಕಾಣುತ್ತಿರುವ ಕೊರೊನ, ರಾಜ್ಯದಲ್ಲಿಂದು 18,648 ಸೋಂಕಿತರು ಗುಣಮುಖರಾಗಿ ಬಿಡುಗಡೆ, 7810 ಜನರಿಗೆ ಸೋಂಕು ದೃಢ, ಇಂದಿನ ಪಾಸಿಟಿವಿಟಿ ದರ ಶೇಕಡ 6.02
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಖಿತರ ಸಂಖ್ಯೆ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ ಇಂದು 1348 ಜನರಿಗೆ ಕೊರೊನಾ ಸೋಂಕು ತಗುಲಿದೆ.
ರಾಜ್ಯದಲ್ಲಿ 7810 ಜನರಿಗೆ ಸೋಂಕು ತಗಲಿದೆ ಎಂದು ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿಂದು 18,648 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 4125 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇಕಡ 6.02 ರಷ್ಟು ಇದೆ. ರಾಜ್ಯದಲ್ಲಿ ಒಟ್ಟು 1,80,835 ಸಕ್ರಿಯ ಪ್ರಕರಣಗಳಿವೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-62, ಬಳ್ಳಾರಿ-141, ಬೆಳಗಾವಿ-266, ಬೆಂಗಳೂರು ಗ್ರಾಮಾಂತರ-154, ಬೆಂಗಳೂರು ನಗರ-1348, ಬೀದರ್-7, ಚಾಮರಾಜನಗರ-129, ಚಿಕ್ಕಬಳ್ಳಾಪುರ-141, ಚಿಕ್ಕಮಗಳೂರು-223, ಚಿತ್ರದುರ್ಗ-128, ದಕ್ಷಿಣ ಕನ್ನಡ-434, ದಾವಣಗೆರೆ-391, ಧಾರವಾಡ-148, ಗದಗ-73, ಹಾಸನ-581, ಹಾವೇರಿ-64, ಕಲಬುರಗಿ-24, ಕೊಡಗು-125, ಕೋಲಾರ-164, ಕೊಪ್ಪಳ-76, ಮಂಡ್ಯ-467, ಮೈಸೂರು-1251, ರಾಯಚೂರು-30, ರಾಮನಗರ-47, ಶಿವಮೊಗ್ಗ-393, ತುಮಕೂರು-352, ಉಡುಪಿ-223, ಉತ್ತರ ಕನ್ನಡ-250, ವಿಜಯಪುರ-96, ಯಾದಗಿರಿ-22.
ಸೂಚನೆ: ಅನ್ ಲಾಕ್ ಪ್ರಕ್ರಿಯೆ ಬೇಕಾಬಿಟ್ಟಿ ತಿರುಗಾಡಲಿರುವ ಅನುಮತಿಯಲ್ಲ, ನಮ್ಮ ಆರೋಗ್ಯದ ರಕ್ಷಣೆ ನಮ್ಮ ಹೊಣೆ, ಅಂತರ ಕಾಪಾಡಿ, ಮಾಸ್ಕ್ ಧರಿಸಿ