ಪುತ್ತೂರು-ಮಂಜದಲ್ಲಿ ಮರ್ಕಝುಲ್ ಹುದಾ ದಅವಾ ಕಾಲೇಜಿಗೆ ಚಾಲನೆ
ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ (ರಿ) ಸಂಸ್ಥೆಯ ಹೊಸ ಯೋಜನೆಯಾದ ಗಂಡು ಮಕ್ಕಳ ದಅವಾ ಕಾಲೇಜು ಮತ್ತು ಬಾಯ್ಸ್ ಇಸ್ಲಾಮಿಕ್ ಸ್ಕೂಲ್ ಅನ್ನು ಪುತ್ತೂರು ತಾಲೂಕಿನ ಬುಳ್ಳೇರಿಕಟ್ಟೆ ಮಂಜ ಎಂಬಲ್ಲಿ ಪ್ರಸಿದ್ಧ ದರ್ಗಾದ ಸಮೀಪವಿರುವ ಅನ್ಸಾರಿಯ ಜುಮಾ ಮಸ್ಜಿದ್ ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಬೆಳ್ಳಿಹಬ್ಬ 'ಸಿಲ್ವರಿಯಮ್' ಪ್ರಯುಕ್ತ ಹಮ್ಮಿ ಕೊಳ್ಳಲಾದ ಇಪ್ಪತ್ತೈದು ಅಂಶ ಕಾರ್ಯಕ್ರಮಗಳಲ್ಲಿ ದಾವಾ ಕಾಲೇಜು ಪ್ರಮುಖವಾಗಿದೆ.
ಈ ಕಳೆದ ಇಪ್ಪತ್ತ ಮೂರು ವರ್ಷಗಳಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟು ಕಾರ್ಯಾಚರಿಸಿದ ಕುಂಬ್ರ ಮರ್ಕಝ್, ಈ ಮೂಲಕ
ಗಂಡು ಮಕ್ಕಳ ವಿದ್ಯಾಭ್ಯಾಸ ಕ್ಷೇತ್ರಕ್ಕೂ ಕಾಲಿಟ್ಟಿದೆ.
'ಮರ್ಕಝ್ ಅಕಾಡೆಮಿ ಆಫ್ ಥಿಯೋಲಜಿ' ಎಂಬ
ಈ ಸಂಸ್ಥೆಯಲ್ಲಿ, ಶಾಲೆಯಲ್ಲಿ ಎಂಟು, ಒಂಬತ್ತು ಮತ್ತು ಪ್ರಥಮ ಪಿಯುಸಿ ತರಗತಿಗಳಿಗೆ ಪ್ರವೇಶ ನೀಡಲಾಗುವುದು.
ಪ್ರಸಿದ್ಧ ವಿದ್ವಾಂಸರಾಗಿದ್ದ ಮರ್ಹೂಮ್ ಪಿಎಂಕೆ ಮದನಿ ಪರ್ಲಡ್ಕ ದಶಕಗಳ ಹಿಂದೆ ಸ್ಥಾಪಿಸಿದ ಸದರಿ ಮಸೀದಿಯಲ್ಲಿ ಈ ಹಿಂದೆ ಹಲವು ಪ್ರಮುಖ ಅಲಿಂಗಳು ದರ್ಸಿಗೆ ನೇತೃತ್ವ ವಹಿಸಿದ್ದರು
ಏಪ್ರಿಲ್ ಇಪ್ಪತ್ತಾರು ಶುಕ್ರವಾರ ನೂತನ ದಾವಾ ಕಾಲೇಜಿನ ಉದ್ಘಾಟನೆ ನಡೆಯಲಿದ್ದು ಪ್ರಾಂಶುಪಾಲರಾಗಿ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಕಾರ್ಯ ನಿರ್ವಹಿಸಲಿದ್ದಾರೆ. ಇದು ಮರ್ಕಝುಲ್ ಹುದಾ ಕರ್ನಾಟಕ (ರಿ) ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸಲಿದೆ.