ರಾಜ್ಯದಲ್ಲಿ ಕೊರೊನ ಭಾರಿ ಇಳಿಕೆ, ಇಂದಿನ ಪಾಸಿಟಿವಿಟಿ ದರ 1.92%, ಡಿಸ್ಚಾರ್ಜ್ 5,933,

ರಾಜ್ಯದಲ್ಲಿ ಕೊರೊನ ಭಾರಿ ಇಳಿಕೆ, ಇಂದಿನ ಪಾಸಿಟಿವಿಟಿ ದರ 1.92%, ಡಿಸ್ಚಾರ್ಜ್ 5,933, ಪಾಸಿಟಿವ್ 2,576



ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂದು 2,576 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 93 ಮಂದಿ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 5,933 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇನ್ನು 97,592 ಸಕ್ರೀಯ ಪ್ರಕರಣಗಳಿವೆ. ಇಂದಿನ ಖಚಿತ ಪ್ರಕರಣಗಳ ಪ್ರಮಾಣ ಶೇ1.92 ರಷ್ಟಿದ್ದು, ಮೃತಪಟ್ಟವರ ಪ್ರಮಾಣ ಶೇ 3.61ರಷ್ಟಿದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-8, ಬಳ್ಳಾರಿ-19, ಬೆಳಗಾವಿ-68, ಬೆಂಗಳೂರು ಗ್ರಾಮಾಂತರ-55, ಬೆಂಗಳೂರು ನಗರ-563, ಬೀದರ್ -3, ಚಾಮರಾಜನಗರ-55, ಚಿಕ್ಕಬಳ್ಳಾಪುರ-27, ಚಿಕ್ಕಮಗಳೂರು-83, ಚಿತ್ರದುರ್ಗ-45, ದಕ್ಷಿಣ ಕನ್ನಡ-263, ದಾವಣಗೆರೆ-81, ಧಾರವಾಡ-28, ಗದಗ-17, ಹಾಸನ-138, ಹಾವೇರಿ-13, ಕಲಬುರಗಿ-4, ಕೊಡಗು-150, ಕೋಲಾರ-79, ಕೊಪ್ಪಳ-55, ಮಂಡ್ಯ-95, ಮೈಸೂರು-282, ರಾಯಚೂರು-9, ರಾಮನಗರ-14, ಶಿವಮೊಗ್ಗ-194, ತುಮಕೂರು-99, ಉಡುಪಿ-71, ಉತ್ತರ ಕನ್ನಡ-52, ವಿಜಯಪುರ-2, ಯಾದಗಿರಿ-4.


ಹೆಚ್ಚಿನ ಸುದ್ದಿ ಇಲ್ಲಿ ಒತ್ತಿರಿ


ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ

أحدث أقدم