ಕಳೆದ 24 ಗಂಟೆಯಲ್ಲಿ ದೇಶದಲ್ಲಿ 60,471 ಹೊಸ ಸೋಂಕು ಪತ್ತೆ, 1,17,525 ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳು 9,13,378

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 60,471 ಹೊಸ ಸೋಂಕು ಪತ್ತೆ, 1,17,525 ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳು  9,13,378 


ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಳೆದ 77 ದಿನಗಳಲ್ಲೇ ಕಡಿಮೆ ಸೋಂಕಿತರ ಸಂಖ್ಯೆ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲಾಗಿದೆ. ರಾಷ್ಟ್ರೀಯ ಆರೋಗ್ಯ ಇಲಾಖೆ ನೀಡಿದ ಮಾಹಿತಿಯನ್ವಯ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 60,471 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.


ಈ ಅವಧಿಯಲ್ಲಿ ದೇಶದಲ್ಲಿ 2726 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, 24 ಗಂಟೆ ಅವಧಿಯಲ್ಲಿ 1,17,525 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ರಿಕವರಿ ದರ 95.54ರಲ್ಲಿದೆ. ಸದ್ಯ 9,13,378 ಸಕ್ರಿಯ ಪ್ರಕರಣಗಳಿವೆ.


ದೇಶದ ಐದು ರಾಜ್ಯಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಕಂಡು ಬಂದಿದೆ. ತಮಿಳುನಾಡಿನಲ್ಲಿ 12,772 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 8129 ಸೋಂಕು ಪ್ರಕರಣಗಳು, ಕೇರಳ ರಾಜ್ಯದಲ್ಲಿ 8129 ಸೋಂಕು ಪ್ರಕರಣಗಳು, ಕರ್ನಾಟಕದಲ್ಲಿ 6835 ಪ್ರಕರಣಗಳು ಮತ್ತು ಆಂಧ್ರ ಪ್ರದೇಶ ರಾಜ್ಯದಲ್ಲಿ 4,549 ಸೋಂಕು ಪ್ರಕರಣಗಳು ಪತ್ತೆಯಾಗಿದೆ.


ಸೂಚನೆ: ಮಹಾ ಮಾರಿಯ ಕೊಂಡಿ ಕಳಚೋಣ, ಮಾಸ್ಕ್ ಧರಿಸಿ, ಸಾಮಜಿಕ ಅಂತರ ಕಾಪಾಡಿ

أحدث أقدم