ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 60,753 ಮಂದಿಗೆ ಕೊರೊನಾ, 97,743 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ದೇಶದಲ್ಲಿ 7,60,019 ಸಕ್ರಿಯ ಪ್ರಕರಣಗಳಿವೆ
ನವದೆಹಲಿ, ಜೂನ್ 19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 60,753 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ 97,743 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಂದೇ ದಿನದಲ್ಲಿ 1647 ಮಂದಿ ಮೃತಪಟ್ಟಿದ್ದಾರೆ, ಇಲ್ಲಿಯವರೆಗೆ 3,85,137 ಮಂದಿ ಮೃತಪಟ್ಟಿದ್ದಾರೆ. ಒಟ್ಟು 2,98,23,546 ಪ್ರಕರಣಗಳಿವೆ, ಇದುವರೆಗೆ 2,86,78,390 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 7,60,019 ಸಕ್ರಿಯ ಪ್ರಕರಣಗಳಿವೆ, ದೇಶದಲ್ಲಿ 27,23,88,783 ಮಂದಿಗೆ ಲಸಿಕೆ ನೀಡಲಾಗಿದೆ.