ರಾಜ್ಯದಲ್ಲಿ ಕೊರೊನ ಮತ್ತಷ್ಟು ಇಳಿಕೆ: ಇಂದು 4,517 ಕೊರೋನಾ ಪಾಸಿಟಿವ್ ಪ್ರಕರಣ, ಪಾಸಿಟಿವಿಟಿ ದರ ಶೇ. 2.58%

ರಾಜ್ಯದಲ್ಲಿ ಕೊರೊನ ಮತ್ತಷ್ಟು ಇಳಿಕೆ: ಇಂದು 4,517 ಕೊರೋನಾ ಪಾಸಿಟಿವ್ ಪ್ರಕರಣ, ಪಾಸಿಟಿವಿಟಿ ದರ ಶೇ. 2.58%


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು 4,517 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 120 ಮಂದಿ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 8,456 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ 1,26,813 ಸಕ್ರೀಯ ಪ್ರಕರಣಗಳಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2.58ಕ್ಕೆ ಇಳಿದಿದೆ.
ದಕ್ಷಿಣ ಕನ್ನಡ: ಅಗತ್ಯ ವಸ್ತುಗಳ ಖರೀದಿ ಅವಧಿ ವಿಸ್ತರಣೆ,  ಜೂನ್ 21ರಿಂದ ಅನ್ವಯವಾಗುವಂತೆ ಕೆಲವೊಂದು ನಿಯಮಗಳನ್ನು ಸಡಿಲಿಕೆ, ನೈಟ್ ಕರ್ಫ್ಯೂ ಮುಂದುವರಿಕೆ


ಮಂಗಳೂರು : ಜಿಲ್ಲೆಯಲ್ಲಿ ಲಾಕ್ ಡೌನ್ ಜುಲೈ 5 ರ ವರೆಗೆ ಮುಂದುವರಿಯಲಿದ್ದು, ಅಗತ್ಯ ವಸ್ತುಗಳ ಖರೀದಿ ಅವಧಿಯನ್ನು ಮಧ್ಯಾಹ್ನ 1ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.


ಜೂನ್ 21 ರಿಂದ ಹೊಸ ಮಾರ್ಗಸೂಚಿ ಅನ್ವಯವಾಗಲಿದ್ದು, ಕೆಲವೊಂದು ಅಗತ್ಯ ಸೇವೆಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಅದರಂತೆ ಜೂನ್.21ರಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಜುಲೈ 5ರ ಸಂಜೆಯವರೆಗೂ ವಿಸ್ತರಣೆಯಾಗಲಿದೆ.


ಜೂನ್ 21ಕ್ಕೆ ಅನ್ವಯವಾಗುವಂತೆ ಕೆಲವೊಂದು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

>ಅದರಂತೆ ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿಬದಿ ವ್ಯಾಪಾರ ಮತ್ತು ಮದ್ಯ ಪಾರ್ಸೆಲ್ ಗಷ್ಟೇ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ.

>ಜಿಲ್ಲೆಯಾದ್ಯಂತ ಯಾವುದೇ ಬಸ್ ಸಂಚಾರಕ್ಕೆ ಅನುಮತಿ ‌ನೀಡಲಾಗಿಲ್ಲ. ಆದರೆ ಅಟೋ ರಿಕ್ಷಾ ಮತ್ತು ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರು ಸಂಚರಿಸಲು ಅನುವುಮಾಡಿಕೊಡಲಾಗಿದೆ.

>ರಾತ್ರಿ.7ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿದ್ದು, ಅದರಂತೆ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆ.7ರವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ.

>ಕಟ್ಟಡ ನಿರ್ಮಾಣ ಚಟುವಟಿಕೆ ಮತ್ತು ಅದಕ್ಕೆ ಅಗತ್ಯ ವಸ್ತುಗಳಾದ ಸ್ಟೀಲ್, ಸಿಮೆಂಟ್ ಅಂಗಡಿಗಳನ್ನು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತೆರೆಯಲು ಅನುಮತಿ ನೀಡಲಾಗಿದೆ.

>ಸರಕಾರಿ ಕಚೇರಿಗಳಾದ ಕೃಷಿ ಮತ್ತು ಸಂಬಂಧಿತ ಕಚೇರಿ, ಲೋಕೋಪಯೋಗಿ ಇಲಾಖೆ, ವಸತಿ, ಪ್ರಾದೇಶಿಕ ಸಾರಿಗೆ ಕಚೇರಿ, ಸಹಕಾರ ಮತ್ತು ನಬಾರ್ಡ್, ಕಂದಾಯ ಇಲಾಖೆಯ ಕಚೇರಿಗಳಲ್ಲಿ ಶೇಕಡಾ 50% ಸಂಬಂಧಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

>ಪಾರ್ಕ್ , ಉದ್ಯಾನವನಗಳನ್ನು ಸಾರ್ವಜನಿಕರಿಗೆ ತೆರೆಯಲು ಅವಕಾಶವಿಲ್ಲ.

>ಕನ್ನಡಕದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.


ಹೆಚ್ಚಿನ ಸುದ್ದಿಗಾಗಿ ಇಲ್ಲಿ CLICK ಮಾಡಿ


ಸೂಚನೆ: ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೊನ ಗೆಲ್ಲೋಣ 

Previous Post Next Post