ರಾಜ್ಯದಲ್ಲಿ ಇಂದು ಹೊಸದಾಗಿ 5783 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 15,290 ಜನ ಗುಣಮುಖರಾಗಿ ಬಿಡುಗಡೆ, ಇಂದಿನ ಪಾಸಿಟಿವಿಟಿ ದರ 4.05%

ರಾಜ್ಯದಲ್ಲಿ ಇಂದು ಹೊಸದಾಗಿ 5783 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 15,290 ಜನ ಗುಣಮುಖರಾಗಿ ಬಿಡುಗಡೆ, ಇಂದಿನ ಪಾಸಿಟಿವಿಟಿ ದರ 4.05%



ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5783 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 15,290 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದಿನ ಪಾಸಿಟಿವಿಟಿ ದರ 4.05%


ರಾಜ್ಯದಲ್ಲಿ ಇವತ್ತು 168 ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,37,050 ಕ್ಕೆ ಇಳಿದಿದೆ


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :


ಬಾಗಲಕೋಟೆ-7, ಬಳ್ಳಾರಿ-155, ಬೆಳಗಾವಿ-139, ಬೆಂಗಳೂರು ಗ್ರಾಮಾಂತರ-207, ಬೆಂಗಳೂರು ನಗರ 1100, ಬೀದರ್-11, ಚಾಮರಾಜನರ-83, ಚಿಕ್ಕಬಳ್ಳಾಪುರ-278, ಚಿತ್ರದುರ್ಗ-114, ದಕ್ಷಿಣ ಕನ್ನಡ-1006, ದಾವಣಗೆರೆ-174, ಧಾರವಾಡ-65, ಗದಗ-23, ಹಾಸನ-390, ಹಾವೇರಿ-28, ಕಲಬುರಗಿ-18, ಕೊಡಗು-147, ಕೋಲಾರ-89,ಕೊಪ್ಪಳ-60, ಮಂಡ್ಯ-249, ಮೈಸೂರು-551, ರಾಯಚೂರು-15, ರಾಮನಗರ-41, ಶಿವಮೊಗ್ಗ-199, ತುಮಕೂರು-153, ಉಡುಪಿ-188,ಉತ್ತರ ಕನ್ನಡ-132, ವಿಜಯಪುರ-44. ಯಾದಗಿರಿ-13.


CLICK HERE Visit Our Site


ಜೂನ್ 21 ರ ವರೆಗೆ ಕರ್ನಾಟಕ ಮತ್ತೆ ಸ್ಥಬ್ಧ, 19 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ


ಬೆಂಗಳೂರು: ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.


19 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ನಿರ್ಬಂಧ ಸಡಿಲಿಕೆ ಮಾಡಲಾಗಿದ್ದರೂ, ಸೋಂಕು ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಸಲಾಗಿದೆ. ಅನ್ಲಾಕ್ ಮೊದಲ ಹಂತದಲ್ಲಿ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ.


ಈ ಅವಧಿಯಲ್ಲಿ ಕರ್ನಾಟಕದ 19 ಜಿಲ್ಲೆಗಳು ಮತ್ತೆ ಸ್ತಬ್ಧವಾಗಲಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಉಳಿದಂತೆ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ವಾರಾಂತ್ಯದ ಸಂದರ್ಭದಲ್ಲಿ ಜನ ಸಂಚಾರ, ವೀಕೆಂಡ್ ಪಾರ್ಟಿ, ಮೋಜು-ಮಸ್ತಿ ಹೆಚ್ಚಾಗುವ ಕಾರಣಕ್ಕೆ ಸೋಮವಾರ ಬೆಳಗ್ಗೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.


ಸೂಚನೆ: ಮನೆಯಲ್ಲಿರಿ ಆರೋಗ್ಯವಾಗಿರಿ, ಅಗತ್ಯಕ್ಕಾಗಿ ಹೊರ ಬಂದರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ

أحدث أقدم