ರಾಜ್ಯದಲ್ಲಿ ಕೊರೊನ ಮತ್ತಷ್ಟು ಇಳಿಕೆ, ಇಂದು 6835 ಜನರಿಗೆ ಕೊರೋನಾ ಪಾಸಿಟಿವ್, 15, 409 ಮಂದಿ ಗುಣಮುಖರಾಗಿ ಬಿಡುಗಡೆ, ಪಾಸಿಟಿವಿಟಿ ದರ ಶೆ.4.56%

ರಾಜ್ಯದಲ್ಲಿ ಕೊರೊನ ಮತ್ತಷ್ಟು ಇಳಿಕೆ, ಇಂದು 6835 ಜನರಿಗೆ ಕೊರೋನಾ ಪಾಸಿಟಿವ್,  15, 409 ಮಂದಿ ಗುಣಮುಖರಾಗಿ ಬಿಡುಗಡೆ, ಪಾಸಿಟಿವಿಟಿ ದರ ಶೆ.4.56%


ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ಮತ್ತಷ್ಟು ಇಳಿಮುಖವಾಗಿದ್ದು, 6835 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.


ರಾಜ್ಯದಲ್ಲಿ ಇವತ್ತು 120 ಮಂದಿ ಸೋಂಕಿತರು ಮೃತಪಟ್ಟಿದ್ದು, ಇವತ್ತು 15, 409 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,72,141 ಸಕ್ರಿಯ ಪ್ರಕರಣಗಳಿವೆ.

ಪಾಸಿಟಿವಿಟಿ ದರ ಶೇಕಡ 4.56 ರಷ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 1470 ಜನರಿಗೆ ಸೋಂಕು ತಗುಲಿದೆ. 12 ಸೋಂಕಿತರು ಮೃತಪಟ್ಟಿದ್ದಾರೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-57, ಬಳ್ಳಾರಿ-203, ಬೆಳಗಾವಿ-191, ಬೆಂಗಳೂರು ಗ್ರಾಮಾಂತರ-191, ಬೆಂಗಳೂರು ನಗರ-1470, ಬೀದರ್-14, ಚಾಮರಾಜನಗರ-119, ಚಿಕ್ಕಬಳ್ಳಾಪುರ-160, ಚಿಕ್ಕಮಗಳೂರು-185, ಚಿತ್ರದುರ್ಗ-195, ದಕ್ಷಿಣ ಕನ್ನಡ-648, ದಾವಣಗೆರೆ-103,ಧಾರವಾಡ-103,ಗದಗ-28, ಹಾಸನ-507, ಹಾವೇರಿ-63, ಕಲಬುರಗಿ-31, ಕೊಡಗು-110, ಕೋಲಾರ-115, ಕೊಪ್ಪಳ-95, ಮಂಡ್ಯ-256, ಮೈಸೂರು-670, ರಾಯಚೂರು-33, ರಾಮನಗರ-26, ಶಿವಮೊಗ್ಗ-353, ತುಮಕೂರು-386, ಉಡುಪಿ-122,ಉತ್ತರ ಕನ್ನಡ-204,ವಿಜಯಪುರ-103, ಯಾದಗಿರಿ-20.


ಸೂಚನೆ: ಮನೆಯಲ್ಲಿರಿ ಆರೋಗ್ಯವಾಗಿರಿ ಅಗತ್ಯಕ್ಕಾಗಿ ಹೊರಬಂದರೆ ಮಾಸ್ಕ್ ಧರಿಸಿ, ಅಂತರ ಕಾಪಾಡಿ 

Previous Post Next Post