ಲಕ್ಷದ್ವೀಪ ಜನರ ಇಚ್ಛೆಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ: ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಗೆ ಕರೆ ಮಾಡಿ ನಿಲುವು ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಲಕ್ಷದ್ವೀಪ ಜನರ ಇಚ್ಛೆಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ: ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಗೆ ಕರೆ ಮಾಡಿ ನಿಲುವು ವ್ಯಕ್ತಪಡಿಸಿದ  ಕೇಂದ್ರ ಗೃಹ ಸಚಿವ ಅಮಿತ್ ಶಾ 
ಕೊಝಿಕೋಡ್: ಲಕ್ಷದ್ವೀಪ ಜನರ ಇಚ್ಛೆಗೆ ವಿರುದ್ಧವಾಗಿ ಕಾನೂನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.  ಅಮಿತ್ ಶಾ ಅವರು ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದಾರೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತಂದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟುಮಾಡುವ ಕಾರಣ ಮಧ್ಯಪ್ರವೇಶಿಸುವಂತೆ ಕೋರಿ ಸುಲ್ತಾನುಲ್ ಉಲಮಾ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.  ಇದನ್ನು ಓದಿದ ನಂತರ ಶಾ ನೇರವಾಗಿ ಕರೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

 ಪತ್ರದಲ್ಲಿ ಬರೆದಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು.

ಕೇಂದ್ರ ಸರ್ಕಾರ ಲಕ್ಷದ್ವೀಪ ಜನರೊಂದಿಗಿದೆ.  ದ್ವೀಪದ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ರಕ್ಷಿಸಲು ದ್ವೀಪವಾಸಿಗಳೊಂದಿಗೆ  ಕೇಂದ್ರ ಸರ್ಕಾರ ನಿಲ್ಲುತ್ತದೆ.  ಯಾವುದೇ ಚಿಂತೆ ಬೇಡ ಮತ್ತು ಜನನ ವಿರೋಧಿ ಚಟುವಟಿಕೆಗಳು ಜಾರಿಗೆ ತರುವೂದಿಲ್ಲ ಎಂದು ಅಮಿತ್ಶಾ ಹೇಳಿದರು.

 ಅದೇ ಸಮಯದಲ್ಲಿ, ದ್ವೀಪವಾಸಿಗಳು ಭಯ ಭೀತಿ ಹೊಂದಿದ್ದಾರೆ ಮತ್ತು ಕಳೆದ ಆರು ತಿಂಗಳಲ್ಲಿ ಅವರ ಮೇಲೆ ವಿಧಿಸಲಾದ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಎಪಿ ಉಸ್ತಾದ್ ಸಂಭಾಷಣೆಯಲ್ಲಿ ಹೇಳಿದರು.  ಜನರ ಇಚ್ಛೆಗೆ ವಿರುದ್ಧವಾಗಿ ಸ್ಥಾಪಿಸಲಾದ ಹೊಸ ಕಾನೂನುಗಳನ್ನು ರದ್ದುಪಡಿಸಿದರೆ ಮಾತ್ರ
 ಜನರು ಶಾಂತಿಯಿಂದ ಬದುಕಲು ಸಾಧ್ಯ ಎಂದು ಸುಲ್ತಾನುಲ್ ಉಲಮಾ  ಅಮಿತ್ ಶಾಗೆ ತಿಳಿಸಿದರು.  ಅಮಿತ್ ಶಾ ಅವರು ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದಾರೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತಂದ ಕಾನೂನುಗಳು ದ್ವೀಪವಾಸಿಗಳ ಜೀವನ ಮತ್ತು ಸಂಸ್ಕೃತಿಗೆ ಅಪಾಯವನ್ನುಂಟುಮಾಡುವ ಕಾರಣ ಮಧ್ಯಪ್ರವೇಶಿಸುವಂತೆ ಕೋರಿ ಸುಲ್ತಾನುಲ್ ಉಲಮಾ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.  ಇದನ್ನು ಓದಿದ ನಂತರ ಶಾ ನೇರವಾಗಿ ಕರೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

 ಪತ್ರದಲ್ಲಿ ಬರೆದಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು.

ಕೇಂದ್ರ ಸರ್ಕಾರ ಲಕ್ಷದ್ವೀಪ ಜನರೊಂದಿಗಿದೆ.  ದ್ವೀಪದ ಜನರ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ರಕ್ಷಿಸಲು ದ್ವೀಪವಾಸಿಗಳೊಂದಿಗೆ  ಕೇಂದ್ರ ಸರ್ಕಾರ ನಿಲ್ಲುತ್ತದೆ.  ಯಾವುದೇ ಚಿಂತೆ ಬೇಡ ಮತ್ತು ಜನನ ವಿರೋಧಿ ಚಟುವಟಿಕೆಗಳು ಜಾರಿಗೆ ತರುವೂದಿಲ್ಲ ಎಂದು ಅಮಿತ್ಶಾ ಹೇಳಿದರು.

 ಅದೇ ಸಮಯದಲ್ಲಿ, ದ್ವೀಪವಾಸಿಗಳು ಭಯ ಭೀತಿ ಹೊಂದಿದ್ದಾರೆ ಮತ್ತು ಕಳೆದ ಆರು ತಿಂಗಳಲ್ಲಿ ಅವರ ಮೇಲೆ ವಿಧಿಸಲಾದ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಎಪಿ ಉಸ್ತಾದ್ ಸಂಭಾಷಣೆಯಲ್ಲಿ ಹೇಳಿದರು.  ಜನರ ಇಚ್ಛೆಗೆ ವಿರುದ್ಧವಾಗಿ ಸ್ಥಾಪಿಸಲಾದ ಹೊಸ ಕಾನೂನುಗಳನ್ನು ರದ್ದುಪಡಿಸಿದರೆ ಮಾತ್ರ
 ಜನರು ಶಾಂತಿಯಿಂದ ಬದುಕಲು ಸಾಧ್ಯ ಎಂದು ಸುಲ್ತಾನುಲ್ ಉಲಮಾ  ಅಮಿತ್ ಶಾಗೆ ತಿಳಿಸಿದರು.
Previous Post Next Post