ರಾಜ್ಯದಲ್ಲಿ ಕೊರೋನ ಮತ್ತಷ್ಟು ಇಳಿಕೆ, ಪಾಸಿಟಿವಿಟಿ ದರ ಶೇ.1.34ಕ್ಕೆ ಕುಸಿತ, ಇಂದು 2,082 ಪಾಸಿಟಿವ್

ರಾಜ್ಯದಲ್ಲಿ ಕೊರೋನ ಮತ್ತಷ್ಟು ಇಳಿಕೆ,  ಪಾಸಿಟಿವಿಟಿ ದರ ಶೇ.1.34ಕ್ಕೆ ಕುಸಿತ, ಇಂದು 2,082 ಪಾಸಿಟಿವ್


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿದ್ದು ಇಂದು 2,082 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 86 ಮಂದಿ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 7,751 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ 48,116 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,54,655 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 2,082 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.34ಕ್ಕೆ ಇಳಿದಿದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ- 5, ಬಳ್ಳಾರಿ-20, ಬೆಳಗಾವಿ-91, ಬೆಂಗಳೂರು ಗ್ರಾಮಾಂತರ-55, ಬೆಂಗಳೂರು ನಗರ-481, ಬೀದರ್-07, ಚಾಮರಾಜನಗರ-36, ಚಿಕ್ಕಬಳ್ಳಾಪುರ-21, ಚಿಕ್ಕಮಗಳೂರು-79, ಚಿತ್ರದುರ್ಗ-18, ದಕ್ಷಿಣ ಕನ್ನಡ-214, ದಾವಣಗೆರೆ-48, ಧಾರವಾಡ-43, ಗದಗ-05, ಹಾಸನ-202, ಹಾವೇರಿ-10, ಕಲಬುರಗಿ-20, ಕೊಡಗು-25, ಕೋಲಾರ-47, ಕೊಪ್ಪಳ-09, ಮಂಡ್ಯ-72, ಮೈಸೂರು-227, ರಾಯಚೂರು-03, ರಾಮನಗರ-06, ಶಿವಮೊಗ್ಗ-108, ತುಮಕೂರು-89, ಉಡುಪಿ-102, ಉತ್ತರ ಕನ್ನಡ-28, ವಿಜಯಪುರ-05, ಯಾದಗಿರಿ-06.


Click Here ಹೆಚ್ಚಿನ ಸುದ್ದಿ ಓದಿ, ಸುಲಭವಾಗಿ ಸುದ್ದಿ ಓದಿ

 

ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ

أحدث أقدم