ರಾಜ್ಯದಲ್ಲಿ ಕೊರೊನ ಮತ್ತೆ ಇಳಿಕೆ, 1,386 ಪಾಸಿಟಿವ್, 3,204 ಡಿಸ್ಚಾರ್ಜ್, ಪಾಸಿಟಿವ್ ದರ 1.26%ಕ್ಕೆ ಕುಸಿತ

ರಾಜ್ಯದಲ್ಲಿ ಕೊರೊನ ಇಳಿಕೆ, ಇಂದು1,386 ಪಾಸಿಟಿವ್, 3,204 ಡಿಸ್ಚಾರ್ಜ್, ಪಾಸಿಟಿವ್ ದರ 1.26%ಕ್ಕೆ ಕುಸಿತ


ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,386 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 61 ಜನರು ಸೋಂಕಿಗೆ ಬಲಿಯಾಗಿದ್ದು, 3,204 ಜನರು ಗುಣಮುಖರಾಗಿದ್ದಾರೆ.


ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 28,72,684ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 35,896ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 34,858ಕ್ಕೆ ಇಳಿದಿದೆ, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.



ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,386 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 47, ಬೆಂಗಳೂರು ನಗರ 319, ಬೀದರ್ 5, ಚಾಮರಾಜನಗರ 24, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 46, ಚಿತ್ರದುರ್ಗ 13, ದಕ್ಷಿಣ ಕನ್ನಡ 126. ದಾವಣಗೆರೆ 15, ಧಾರವಾಡ 16, ಗದಗ 5, ಹಾಸನ 108, ಹಾವೇರಿ 5, ಕಲಬುರಗಿ 16, ಕೊಡಗು 73, ಕೋಲಾರ 31, ಕೊಪ್ಪಳ 3, ಮಂಡ್ಯ 44, ಮೈಸೂರು 177, ರಾಯಚೂರು 1, ರಾಮನಗರ 14, ಶಿವಮೊಗ್ಗ 68, ತುಮಕೂರು 69, ಉಡುಪಿ 66, ಉತ್ತರ ಕನ್ನಡ 32, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 5 ಪ್ರಕರಣ ಪತ್ತೆಯಾಗಿವೆ.


ಸೂಚನೆ- ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ


Read More


Previous Post Next Post