ರಾಜ್ಯದಲ್ಲಿ ಇಂದು 1639 ಪಾಸಿಟಿವ್, ಬೀದರ್ ಯಾದಗಿರಿ ಶೂನ್ಯ, ಇಲ್ಲಿದೆ ಜಿಲ್ಲೆಗಳ ವಿವರ

ರಾಜ್ಯದಲ್ಲಿ ಇಂದು 1639 ಪಾಸಿಟಿವ್ , ಬೀದರ್ ಯಾದಗಿರಿ ಶೂನ್ಯ, ಇಲ್ಲಿದೆ ಜಿಲ್ಲೆಗಳ ವಿವರ


ಬೆಂಗಳೂರು: ರಾಜ್ಯದಲ್ಲಿ ಇಂದು 1639 ಜನರಿಗೆ ಸೋಂಕು ತಗುಲಿದ್ದು, 36 ಮಂದಿ ಮೃತಪಟ್ಟಿದ್ದಾರೆ. 2214 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಪಾಸಿಟಿವಿಟಿ ದರ ಶೇಕಡ 1.07 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 28,88,341 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,262 ಸಾವನ್ನಪ್ಪಿದ್ದು, 28, 26,411 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 25,645 ಸಕ್ರಿಯ ಪ್ರಕರಣಗಳು ಇವೆ. 


ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ

ಬಾಗಲಕೋಟೆ 3, ಬಳ್ಳಾರಿ 14, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 419, ಬೀದರ್ 0, ಚಾಮರಾಜನಗರ 22, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 92, ಚಿತ್ರದುರ್ಗ 29, ದಕ್ಷಿಣಕನ್ನಡ 190, ದಾವಣಗೆರೆ 13 ಜನರಿಗೆ ಸೋಂಕು ತಗುಲಿದೆ. ಧಾರವಾಡ 19, ಗದಗ 1, ಹಾಸನ 141, ಹಾವೇರಿ 2, ಕಲಬುರಗಿ 2, ಕೊಡಗು 63, ಕೋಲಾರ 35, ಕೊಪ್ಪಳ 5, ಮಂಡ್ಯ 60, ಮೈಸೂರು 160, ರಾಯಚೂರು 1, ರಾಮನಗರ 5 ಶಿವಮೊಗ್ಗ 37, ತುಮಕೂರು 63, ಉಡುಪಿ 104, ಉತ್ತರಕನ್ನಡ 48, ವಿಜಯಪುರ 10, ಯಾದಗಿರಿ 0 ಜನರಿಗೆ ಸೋಂಕು ತಗುಲಿದೆ.




Read More

Previous Post Next Post