ಫಿಲಿಪ್ಪೈನ್ಸ್ ಸೇನಾ ವಿಮಾನ ಅಪಘಾತ: 17 ಯೋಧರ ಮರಣ, 40 ಮಂದಿಯ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಚರಣೆ

ಫಿಲಿಪ್ಪೈನ್ಸ್  ಸೇನಾ ವಿಮಾನ ಅಪಘಾತ: 17 ಯೋಧರ ಮರಣ, 40 ಮಂದಿಯ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಚರಣೆ 

ಫಿಲಿಪೈನ್ಸ್​​ ದೇಶದ ಸೇನಾ ವಿಮಾನ (ಏರ್​ಫೋರ್ಸ್​) C-130 ಅಪಘಾತಕ್ಕೀಡಾಗಿದೆ. ಇದರಲ್ಲಿ ಸುಮಾರು 92 ಮಂದಿ ಇದ್ದರು. ಅವರಲ್ಲೀಗ 17 ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದು, 40 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಮೃತರ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಸುಲು ಪ್ರಾಂತ್ಯದಲ್ಲಿ ಫಿಲಿಪೈನ್ಸ್​ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತನ್ನಿಮಿತ್ತ ದಕ್ಷಿಣದಲ್ಲಿರುವ ಕಾಗಾಯನ್ ಡಿ ಓರೋ ನಗರದಿಂದ ಯೋಧರು ಸುಲು ಪ್ರಾಂತ್ಯಕ್ಕೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. 

92 ಮಂದಿಯಲ್ಲಿ ಮೂವರು ಪೈಲಟ್​ಗಳು, ಐವರು ವಿಮಾನ ಸಿಬ್ಬಂದಿಯಾಗಿದ್ದರೆ, ಉಳಿದವರೆಲ್ಲ ಸೈನಿಕರೇ ಆಗಿದ್ದರು. ಮೃತಪಟ್ಟ 17 ಮಂದಿ ಕೂಡ ಸೇನಾ ಸಿಬ್ಬಂದಿಯೇ ಆಗಿದ್ದಾರೆ ಎಂದು ಫಿಲಿಪೈನ್ಸ್ ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ತಿಳಿಸಿದ್ದಾರೆ. ಈ ಸೇನಾವಿಮಾನ ಇನ್ನೇನು ಕೆಲವೇ ಕ್ಷಣ ಕಳೆದರೆ ಲ್ಯಾಂಡ್​ ಆಗುತ್ತಿತ್ತು. ಆದರೆ ದಕ್ಷಿಣದಲ್ಲಿರುವ ಸುಲು ಪ್ರಾಂತ್ಯದಲ್ಲಿರುವ ಪರ್ವತಪ್ರದೇಶದಲ್ಲಿರುವ ಪಟಿಕುಲ್​​ನ ಬಾಂಗ್​ಕಲ್​ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ನೆಲಕ್ಕೆ ಅಪ್ಪಳಿಸಿದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ದೊಡ್ಡ ಅನಾಹುತವೇ ಆಗಿದೆ.

ಸುಲು ಪ್ರಾಂತ್ಯದಲ್ಲಿ ಫಿಲಿಪೈನ್ಸ್​ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತನ್ನಿಮಿತ್ತ ದಕ್ಷಿಣದಲ್ಲಿರುವ ಕಾಗಾಯನ್ ಡಿ ಓರೋ ನಗರದಿಂದ ಯೋಧರು ಸುಲು ಪ್ರಾಂತ್ಯಕ್ಕೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. 

أحدث أقدم