ರಾಜ್ಯದಲ್ಲಿ ಕೊರೊನ ಇಳಿಮುಖ: ಇಂದು 1806 ಪಾಸಿಟಿವ್, 2748 ಡಿಸ್ಚಾರ್ಜ್, ಪಾಸಿಟಿವಿಟಿ ದರ 1.18%

ರಾಜ್ಯದಲ್ಲಿ ಕೊರೊನ ಇಳಿಮುಖ: ಇಂದು 1806 ಪಾಸಿಟಿವ್, 2748 ಡಿಸ್ಚಾರ್ಜ್, ಪಾಸಿಟಿವಿಟಿ ದರ 1.18% 


ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 1,806 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರೇ, ಸೋಂಕಿತರಾದಂತ 42 ಜನರು ಸಾವನ್ನಪ್ಪಿದ್ದಾರೆ.


ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 411 ಸೇರಿದಂತೆ ರಾಜ್ಯಾಧ್ಯಂತ 1,806 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 28,80,370ಕ್ಕೆ ಏರಿಕೆಯಾಗಿದೆ.


ಇಂದು 2,748 ಸೇರಿದಂತೆ ಇದುವರೆಗೆ 28,12,869 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 31,399 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ ಈ ರೀತಿ ಇದೆ 

ಕೇರಳದಲ್ಲಿ ಇಂದು 13, 750 ಪಾಸಿಟಿವ್ , ಟೆಸ್ಟ್ ಪಾಸಿಟಿವಿಟಿ ದರ 10.55%


ಈಗಿನ ಸುದ್ದಿಯ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದ ಬಗ್ಗೆ ಎಚ್ಚರ ಅಗತ್ಯ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

أحدث أقدم