ರಾಜ್ಯದಲ್ಲಿ ಇಂದು 1890 ಪಾಸಿಟಿವ್, 1631 ಗುಣಮುಖರು

ರಾಜ್ಯದಲ್ಲಿ ಇಂದು 1890 ಪಾಸಿಟಿವ್, 1631 ಗುಣಮುಖರು


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1890 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇವತ್ತು 1631 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ.


ರಾಜ್ಯದಲ್ಲಿ 23,478 ಸಕ್ರಿಯ ಪ್ರಕರಣಗಳು ಇವೆ. ಇವತ್ತು 1,45,197 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಶೇಕಡ 1.30 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ 426 ಮಂದಿಗೆ ಸೋಂಕು ತಗುಲಿದ್ದು, 366 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 9 ಸೋಂಕಿತರು ಮೃತಪಟ್ಟಿದ್ದಾರೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-02, ಬಳ್ಳಾರಿ-20, ಬೆಳಗಾವಿ -103, ಬೆಂಗಳೂರು ಗ್ರಾಮಾಂತರ-17, ಬೆಂಗಳೂರು ನಗರ-426, ಬೀದರ್-4, ಚಾಮರಾಜನಗರ-27, ಚಿಕ್ಕಬಳ್ಳಾಪುರ-10, ಚಿಕ್ಕಮಗಳೂರು-88, ಚಿತ್ರದುರ್ಗ-31, ದಕ್ಷಿಣ ಕನ್ನಡ-345, ದಾವಣಗೆರೆ-4, ಧಾರವಾಡ-9, ಗದಗ-2, ಹಾಸನ-135, ಹಾವೇರಿ-2, ಕಲಬುರಗಿ-6, ಕೊಡಗು-77, ಕೋಲಾರ-28, ಕೊಪ್ಪಳ-1, ಮಂಡ್ಯ-48, ಮೈಸೂರು-142, ರಾಯಚೂರು-1, ರಾಮನಗರ-9, ಶಿವಮೊಗ್ಗ-88, ತುಮಕೂರು-54, ಉಡುಪಿ-155, ಉತ್ತರ ಕನ್ನಡ-47, ವಿಜಯಪುರ-8, ಯಾದಗಿರಿ-1.


ಕೇರಳದಲ್ಲಿ ಇಂದು 20,772 ಪಾಸಿಟಿವ್, ಟೆಸ್ಟ್ ಪಾಸಿಟಿವಿಟಿ ದರ 13.61%


ಕೇರಳದಲ್ಲಿ ಇಂದು 20,772 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,52,639 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 13.61% ಇದೆ. ಚಿಕಿತ್ಸೆಯಲ್ಲಿದ್ದ 14,651 ಮಂದಿ ಎಂದರೋ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. 


Read More

Previous Post Next Post