ರಾಜ್ಯದಲ್ಲಿ ಕೊರೊನ ಇಳಿಮುಖ: ಇಂದು 1977 ಹೊಸ ಪ್ರಕರಣ, 3188 ಡಿಸ್ಚಾರ್ಜ್

ರಾಜ್ಯದಲ್ಲಿ ಕೊರೊನ ಇಳಿಮುಖ: ಇಂದು 1977 ಹೊಸ ಪ್ರಕರಣ, 3188 ಡಿಸ್ಚಾರ್ಜ್



ರಾಜ್ಯದಲ್ಲಿ ಇಂದೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ಕಳೆದ 24 ಗಂಟೆಗಳಲ್ಲಿ 2000ಕ್ಕಿಂತ ಕಡಿಮೆ ಕೇಸ್​ಗಳು ದಾಖಲಾಗಿದೆ.


ರಾಜ್ಯದಲ್ಲಿ 1977 ಹೊಸ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2878564 ಆಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 48 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಇಲ್ಲಿವರೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 36037 ಆಗಿದೆ.


ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 3188 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 2810121 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ. ಕೋವಿಡ್​ 19 ಸೋಂಕಿನ ಶೇಕಡಾವಾರು ಪ್ರಮಾಣ 1.42 ಪ್ರತಿಶತವಾಗಿದ್ದರೆ ಕೊರೊನಾದಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ 2.42 ಆಗಿದೆ. ಕಳೆದ 24 ಗಂಟೆಗಳಲ್ಲಿ 138274 ಕೊರೊನಾ ಪರೀಕ್ಷೆ ಮಾಡಲಾಗಿದ್ದು ಒಟ್ಟು ಕೊರೊನಾ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 32383.


ಬೆಂಗಳೂರು ನಗರದಲ್ಲಿಂದು 462 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1220960 ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 56, ಬಾಗಲಕೋಟೆ 4, ಬಳ್ಳಾರಿ 5, ಬೀದರ್​2, ಚಾಮರಾಜನಗರ 31 , ಚಿಕ್ಕಬಳ್ಳಾಪುರ 27 , ಚಿಕ್ಕಮಗಳೂರು 109 , ಚಿತ್ರದುರ್ಗ 27, ದಕ್ಷಿಣ ಕನ್ನಡ 224 ,ದಾವಣಗೆರೆ 23 ,ಧಾರವಾಡ 12, ಗದಗ 2, ಹಾಸನ 158, ಹಾವೇರಿ 2, ಕಲಬುರಗಿ 8 , ಕೊಡಗು 73,ಕೋಲಾರ 36,ಕೊಪ್ಪಳ 3, ಮಂಡ್ಯ 51, ಮೈಸೂರು 197,ರಾಯಚೂರು 4, ರಾಮನಗರ 16, ಶಿವಮೊಗ್ಗ 71, ತುಮಕೂರು 86, ಉಡುಪಿ 110, ಉತ್ತರ ಕನ್ನಡ 71, ವಿಜಯಪುರ 11, ಯಾದಗಿರಿ 2 ಪ್ರಕರಣಗಳು ವರದಿಯಾಗಿದೆ.


Read More


ಸೂಚನೆ- ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ

أحدث أقدم