ಕರ್ನಾಟಕದಲ್ಲಿ ಇಂದು 2,052 ಪಾಸಿಟಿವ್, 1,332 ಗುಣಮುಖರು

ಕರ್ನಾಟಕದಲ್ಲಿ ಇಂದು 2,052 ಪಾಸಿಟಿವ್, 1,332 ಗುಣಮುಖರು
ರಾಜ್ಯದಲ್ಲಿ ಇಂದು 2,052 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 35 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,01,247 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,491 ಆಗಿದೆ. ಇಂದು 1,332 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,41,479 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 23,253 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,48,861 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,83,65,769 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.97ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ.


ಜಿಲ್ಲಾವಾರು ಲೆಕ್ಕ


ಕೇರಳದಲ್ಲಿ ಇಂದು 22064 ಪಾಸಿಟಿವ್ ಕೇಸ್, ಪಾಸಿಟಿವಿಟಿ ದರ 13.53%

ಕೇರಳದಲ್ಲಿ ಇಂದು ಕೂಡ 22064 ಪಾಸಿಟಿವ್ ಕೇಸ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,63,098 ಸ್ಯಾಂಪಲ್‌ ಟೆಸ್ಟ್ ಮಾಡಲಾಗಿದ್ದು 22064 ಪಾಸಿಟಿವ್ ಕೇಸ್ ದೃಢಪಟ್ಟಿದೆ. ಪಾಸಿಟಿವಿಟಿ ದರ 13.53 ಇದೆ. ಚಿಕಿತ್ಸೆಯಲ್ಲಿದ್ದ 16,649 ಮಂದಿ ಇಂದು ರೋಗ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 


Previous Post Next Post