ರಾಜ್ಯದಲ್ಲಿ ಇಂದು 3104 ಪಾಸಿಟಿವ್, 4992 ಡಿಸ್ಚಾರ್ಜ್

ರಾಜ್ಯದಲ್ಲಿ ಇಂದು 3104 ಪಾಸಿಟಿವ್, 4992 ಡಿಸ್ಚಾರ್ಜ್


ಬೆಂಗಳೂರು: ರಾಜ್ಯದಲ್ಲಿಂದು 3104 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ ಸೋಂಕಿನಿಂದ 92 ಮಂದಿ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 4992 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 40016 ಸಕ್ರಿಯ ಪ್ರಕರಣಗಳು ಇವೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-5, ಬಳ್ಳಾರಿ-24, ಬೆಳಗಾವಿ-157, ಬೆಂಗಳೂರು ಗ್ರಾಮಾಂತರ-67, ಬೆಂಗಳೂರು ನಗರ-715, ಬೀದರ್-6, ಚಾಮರಾಜನಗರ-68, ಚಿಕ್ಕಬಳ್ಳಾಪುರ-29, ಚಿಕ್ಕಮಗಳೂರು-109, ಚಿತ್ರದುರ್ಗ-64, ದಕ್ಷಿಣ ಕನ್ನಡ-216, ದಾವಣಗೆರೆ-60, ಧಾರವಾಡ-29, ಗದಗ-7, ಹಾಸನ-270, ಹಾವೇರಿ-14, ಕಲಬುರಗಿ-15, ಕೊಡಗು-140, ಕೋಲಾರ-108, ಕೊಪ್ಪಳ-15, ಮಂಡ್ಯ-113, ಮೈಸೂರು-389, ರಾಯಚೂರು-4, ರಾಮನಗರ-32, ಶಿವಮೊಗ್ಗ-119, ತುಮಕೂರು-138, ಉಡುಪಿ-114, ಉತ್ತರ ಕನ್ನಡ-72,ವಿಜಯಪುರ-2, ಯಾದಗಿರಿ-3.


ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ

أحدث أقدم