ರಾಜ್ಯದಲ್ಲಿ ಇಂದು 5,631 ಡಿಸ್ಚಾರ್ಜ್, 2,848 ಪಾಸಿಟಿವ್, ಪಾಸಿಟಿವಿಟಿ ದರ ಶೇ. 1.94

ರಾಜ್ಯದಲ್ಲಿ ಇಂದು 5,631 ಡಿಸ್ಚಾರ್ಜ್, 2,848 ಪಾಸಿಟಿವ್, ಪಾಸಿಟಿವಿಟಿ ದರ ಶೇ. 1.94 


ಬೆಂಗಳೂರು: ರಾಜ್ಯದಲ್ಲಿ ಇಂದು 2,848 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 67 ಮಂದಿ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 5,631 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇನ್ನು 41,996 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,46,575 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 2,848 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.94ಕ್ಕೆ ಇಳಿದಿದೆ.


ಮಸೀದಿ, ದರ್ಗಾಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಖಾಝಿ ಮಾಣಿ ಉಸ್ತಾದ್ ಕರೆ


ಮಂಗಳೂರು : ಎಲ್ಲಾ ಮಸೀದಿ, ದರ್ಗಾಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆ ವಿವಿಧ ಮೊಹಲ್ಲಾಗಳ ಖಾಝಿ ಶೈಖುನಾ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ.


ಕೋವಿಡ್ -19 ಮಾರ್ಗಸೂಚಿ ಪಾಲಿಸುವ ಷರತ್ತಿನೊಂದಿಗೆ ಮಸೀದಿ ಹಾಗೂ ದರ್ಗಾಗಳನ್ನು ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ. ಈ ಸಂಬಂಧ ಸರಕಾರ ಹಾಗೂ ರಾಜ್ಯ ವಖ್ಫ್ ಮಂಡಳಿಯು ಸುತ್ತೋಲೆ ಹೊರಡಿಸಿದೆ. ಎಲ್ಲಾ ಮಸೀದಿ ದರ್ಗಾಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಅವರು ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.


Previous Post Next Post