ಹಜ್ಜಾಜ್ ಗಳಿಗೆ ಇಂದು ಬಿಡುವಿಲ್ಲದ ದಿನ , ಜಮ್ರಾಗಳಿಗೆ ಕಲ್ಲೆಸತ ಇಂದಿನಿಂದ

ಹಜ್ಜಾಜ್ ಗಳಿಗೆ ಇಂದು ಬಿಡುವಿಲ್ಲದ ದಿನ , ಜಮ್ರಾಗಳಿಗೆ  ಕಲ್ಲೆಸತ ಇಂದಿನಿಂದ



ಮಿನಾ: ಹಜ್ಜಾಜ್ ಗಳಿಗೆ ಇಂದು ಬಿಡುವಿಲ್ಲದ ದಿನ.  ಹಜ್‌ನ ಪ್ರಮುಖ ಸಂಭ್ರಮಗಳಲ್ಲಿ ಒಂದಾದ ಜಮ್ರಾಗಳಿಗೆ ಕಲ್ಲು ಎಸೆತ ಕಾರ್ಯವು ಇಂದು ಪ್ರಾರಂಭವಾಗುತ್ತದೆ. 


'ಅರಾಫಾ ಸಂಗಮದ ನಂತರ ಮುಸ್ದಲಿಫಾದಲ್ಲಿ ಉಳಿದುಕೊಂಡಿದ್ದ ಹಜ್ಜ್ ಯಾತ್ರಾರ್ಥಿಗಳು ಮುಂಜಾನೆ ಮಿನಾಗೆ ಮರಳಿದರು. ಇಲ್ಲಿಂದ, ಜಮ್ರಾಗೆ ಕಲ್ಲೆಸತದ ನಂತರ ತನ್ನ ತಲೆ ಕೂದಲನ್ನು ಕತ್ತರಿಸಿ, ಮಕ್ಕಾಗೆ ಹಿಂದಿರುಗಿ ಕಅಬಾವನ್ನು ತವಾಫ್ ಮಾಡಿ ಮತ್ತು ಸಅಯ್ ಮಾಡಿ ಮತ್ತೆ ಮಿನಾಗೆ ಹಿಂದಿರುಗಬೇಕು.  ಇವೆಲ್ಲವೂ ಇಂದು ಮಾಡಬೇಕಾದ ಕರ್ಮವಾಗಿದೆ.  ಹಜ್ ಯಾತ್ರಾರ್ಥಿಗಳು ಮಿನಾದಿಂದ ಮಕ್ಕಾಗೆ ವಾಹನಗಳಲ್ಲಿ ಹಾಜಿಗಳು ಪ್ರಯಾಣಿಸುತ್ತಾರೆ. 


'ಅರಫಾ ಸಂಗಮದ ನಂತರ ಮುಸ್ದಾಲಿಫಾದಲ್ಲಿ ರಾತ್ರಿ ತಂಗಿದ್ದ ಹಾಜಿಗಳು ನಂತರ ಕಲ್ಲುಗಳನ್ನು ಸಂಗ್ರಹಿಸಿ ಇಂದು ಮುಂಜಾನೆ ಮಿನಾಗೆ ವಾಪಾಸಾದರು. 


ಕೊವಿಡ್ ಪ್ರೋಟೋಕಾಲ್ ಪಾಲಿಸಿ ಸಾಮಾಜಿಕ ಅಂತರ ಕಾಯ್ದು ಕೊಂಡು ಜಮ್ರಾಗಳಿಗೆ ಕಲ್ಲೆಸೆತ ಕರ್ಮ ಇಂದಿನಿಂದ ಆರಂಭವಾಗಲಿದೆ. 


Previous Post Next Post