ಮೂರು ಜಿಲ್ಲೆಯಲ್ಲಿ ಶೂನ್ಯ, ದಕ ಜಿಲ್ಲೆಯಲ್ಲಿ ಭಾರೀ ಏರಿಕೆ, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಮೂರು ಜಿಲ್ಲೆಯಲ್ಲಿ ಶೂನ್ಯ, ದಕ ಜಿಲ್ಲೆಯಲ್ಲಿ ಭಾರೀ ಏರಿಕೆ, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್



ಬೆಂಗಳೂರು: ರಾಜ್ಯದಲ್ಲಿ ಇಂದು 19 ಮಂದಿ ಸೋಂಕಿತರು ಮೃತಪಟ್ಟಿದ್ದು, 1531 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1430 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ರಾಜ್ಯದಲ್ಲಿ 22,569 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.03 ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 28,99,195 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,40,147 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 36,456 ಸೋಂಕಿತರು ಸಾವನ್ನಪ್ಪಿದ್ದಾರೆ.


ರಾಜಧಾನಿ ಬೆಂಗಳೂರಿನಲ್ಲಿ 376 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 244 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8176 ಸಕ್ರಿಯ ಪ್ರಕರಣಗಳಿವೆ.


ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 376, ಬೀದರ್ 2, ಚಾಮರಾಜನಗರ 29, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 51, ಚಿತ್ರದುರ್ಗ 18, ದಕ್ಷಿಣಕನ್ನಡ 337, ದಾವಣಗೆರೆ 15, ಧಾರವಾಡ 3, ಗದಗ 0, ಹಾಸನ 97, ಹಾವೇರಿ 2, ಕಲಬುರ್ಗಿ 19, ಕೊಡಗು 78, ಕೋಲಾರ 9, ಕೊಪ್ಪಳ 0, ಮಂಡ್ಯ 38, ಮೈಸೂರು 93, ರಾಯಚೂರು 1, ರಾಮನಗರ 0, ಶಿವಮೊಗ್ಗ 86, ತುಮಕೂರು 39, ಉಡುಪಿ 109, ಉತ್ತರಕನ್ನಡ 57, ವಿಜಯಪುರ 4, ಯಾದಗಿರಿ 1 ಪ್ರಕರಣ ಕಂಡು ಬಂದಿದೆ



Read More

أحدث أقدم