ಬಿಎಸ್ ವೈ ರಾಜೀನಾಮೆ: ಕಟೀಲ್ ಗೆ ಹೈಕಮಾಂಡ್ ದಿಢೀರ್ ದಿಲ್ಲಿಗೆ ಬುಲಾವ್, ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

ಬಿಎಸ್ ವೈ ರಾಜೀನಾಮೆ: ಕಟೀಲ್ ಗೆ ಹೈಕಮಾಂಡ್ ದಿಢೀರ್ ದಿಲ್ಲಿಗೆ ಬುಲಾವ್, ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್ 


ಬೆಂಗಳೂರು, (ಜು.26): ಬಿ.ಎಸ್.ಯಡಿಯೂರಪ್ಪ ನಿರೀಕ್ಷೆಯಂತೆ ಇಂದು (ಸೋಮವಾರ) ಸಾಧನಾ ಸಮಾವೇಶದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಿದರು.


ಆದರೆ, ಕರ್ನಾಟಕ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಕರ್ನಾಟಕದ ಮುಂದಿ ಸಿಎಂ ಯಾರು ಆಗ್ತಾರೆ..? ಎನ್ನುವುದನ್ನು ನೋಡಿದ್ರೆ, ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.


ಬಿಜೆಪಿ ಹೈಕಮಾಂಡ್​ ನಿರ್ಧಾರಕ್ಕೆ ಎಲ್ಲರೂ ತಲೆಬಾಗುತ್ತಾರಾ ಅಥವಾ ಮತ್ತೊಮ್ಮೆ ಅಸಮಾಧಾನದ ಸ್ಫೋಟಕಗೊಳ್ಳಲಿದ್ಯಾ? ಎನ್ನುವ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ. ಈ ಎಲ್ಲಾ ಬೆಳವಣಿಗೆಗಳು, ಕುತೂಹಲ ಮೂಡಿಸಿದೆ.


ಕುತೂಹಲ ಮೂಡಿಸಿದ ಕಾಗೇರಿ ನಡೆ
ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಈ ಮಧ್ಯೆ ರಾಜಭವನಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ರಾಜ್ಯಪಾಲ ತಾವರ್​ ಚಂದ್ ಗೆಹ್ಲೋಟ್ ಜೊತೆಗೆ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.


ಇನ್ನೂ ಮುಖ್ಯವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುರುಗೇಶ್ ನಿರಾಣಿ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ ಸಿ.ಟಿ. ರವಿ ಅರವಿಂದ್ ಬೆಲ್ಲದ್ ಹೆಸರು ಸಹ ಸಿಎಂ ಪಟ್ಟಿಯಲ್ಲಿವೆ. ಆದ್ರೆ, ಅಚ್ಚರಿ ಅಂದ್ರೆ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬಂದಿದೆ. ಇದಕ್ಕೆ ಪೂರಕವೆಂಬಂತೆ ಕಟೀಲ್‌ಗೆ ಹೈಕಮಾಂಡ್ ದಿಲ್ಲಿಗೆ ಬರುವಂತೆ ದಿಢೀರ್ ಬುಲಾವ್ ನೀಡಿದ್ದು ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.


ರಾಜ್ಯಕ್ಕೆ ಹೈಕಮಾಂಡ್ ನಿಯೋಗ
ಮುಂದಿನ ಸಿಎಂ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ಹೈಕಮಾಂಡ್‌ ನಿಯೋಗ ನಾಳೆ (ಜು.27) ಕರ್ನಾಟಕಕ್ಕೆ ಆಗಮಿಸಲಿದೆ. ಅಂದೇ ಸಿಎಂ ಅಭ್ಯರ್ಥಿ ಬಗ್ಗೆ ರಾಜ್ಯದ ನಾಯಕರುಗಳ ಬಳಿ ಚರ್ಚೆ ಮಾಡಲಿದ್ದು, ಅಂದೇ ಮುಂದಿನ ಮುಖ್ಯಮಂತ್ರಿ ಹೆಸರು ಅಂತಿಮ ಮಾಡುವ ಸಾಧ್ಯತೆಗಳಿವೆ.

Previous Post Next Post