ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ' ಇಹ್ಸಾನ್ ಕರ್ನಾಟಕ Educational Awareness Campaign- Augast 1 to 15

'ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ' 
ಇಹ್ಸಾನ್ ಕರ್ನಾಟಕ 
Educational Awareness Campaign- Augast 1 to 15


ಕೊರೊನಾ ವೈರಸ್‌ ಶೈಕ್ಷಣಿಕ ರಂಗದ ಮೇಲೆ ಬೃಹತ್ ಮಟ್ಟದ ಏಟು ನೀಡಿದೆ. ಕೋವಿಡ್-19 ಹಾವಳಿಯಿಂದ ಜಗತ್ತಿನಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಅವುಗಳ ಪುನರಾರಂಭದ ಬಗ್ಗೆ ಇನ್ನೂ ಅನಿಶ್ಚಿತತೆ ಮನೆ ಮಾಡಿದೆ. ಕಲಿಯ ಬೇಕಾದ ವಿದ್ಯಾರ್ಥಿಗಳು ಶಿಕ್ಷಣ ಬಿಟ್ಟು ವಕ್ರ ದಾರಿಯನ್ನು ಹುಡುಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿಯನ್ನು ನೀಡುವುದು ಕರ್ತವ್ಯವಾಗಿದೆ.


ಶಿಕ್ಷಣವಿಲ್ಲದ ಬದುಕಿಗೆ ಸಮಾಜದಲ್ಲಿ ಗೌರವವಿಲ್ಲ. ಅವನನ್ನು ಸಮಾಜ ಬೇರೊಂದು ಕಣ್ಣಿನಿಂದ ನೋಡುತ್ತದೆ. ಶಿಕ್ಷಣ ಮನುಷ್ಯನಿಗೆ ಪ್ರಬುದ್ಧತೆ, ಪಕ್ವತೆಯನ್ನು ನೀಡುತ್ತದೆ. 


ಉತ್ತರ ಕರ್ನಾಟಕದಾದ್ಯಂತ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುತ್ತಿರುವ ಇಹ್ಸಾನ್ ಕಳೆದ ಹತ್ತು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣವನ್ನು ನೀಡುತ್ತಾ ಅವರನ್ನು ಸುಸಂಸ್ಕೃತರನ್ನಾಗಿ ಬೆಳೆಸುತ್ತಾ ಬಂದಿದೆ. 


ಈ ಅನಿವಾರ್ಯ ಸಮಯದಲ್ಲಿ ಇಹ್ಸಾನ್ ಕರ್ನಾಟಕ 'ಎಜುಕೇಶನಲ್ ಅವೇರ್ನೆಸ್ ಕಾಂಪೈನ್' ಹಮ್ಮಿಕೊಂಡಿದ್ದು 'ಉತ್ತಮ ಸಮಾಜಕ್ಕಾಗಿ ಉತ್ತಮ ಶಿಕ್ಷಣ' ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್ ಒಂದರಿಂದ ಹದಿನೈದರ (1-15)  ತನಕ ಈ ಕಾಂಪೈನ್ ನಡೆಯಲಿದೆ. ಆ ಮೂಲಕ ವಿದ್ಯಾರ್ಥಿ ಬದುಕಿಗೆ ಶಿಕ್ಷಣ ಜಾಗೃತಿಯನ್ನು ಇಹ್ಸಾನ್ ನೀಡಲಿದೆ.
Previous Post Next Post