SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ

 SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ

ಜುಲೈ.19ರ ನಾಳೆ ಮತ್ತು ಜುಲೈ.22ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಾಗಿ ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ. ನಾಳೆ ಬೆಳಿಗ್ಗೆ 8.30ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಸಜ್ಜುಗೊಂಡಿದ್ದು, ಕೊರೋನಾ ಮುಂಜಾಗ್ರತೆಯಲ್ಲಿ ಪರೀಕ್ಷೆಯನ್ನು ಸುರಕ್ಷಿತ ಕೇಂದ್ರಗಳೆಂದು ಭಾವಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಸರ್ಕಾರ ಮನವಿ ಮಾಡಿದೆ. ಇಂತಹ ನಾಳಿನ ಪರೀಕ್ಷೆಗೆ ಹಾಜರಾಗುತ್ತಿರುವಂತ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ಕೆಳಗಿನ ಕೆಲ ಬಹುಮುಖ್ಯ ಮಾಹಿತಿಯನ್ನು ತಿಳಿದಿರೋದು ಒಳಿತಾಗಿದೆ.


ಶಿಕ್ಷಣ ಸಚಿವರು ಸಾವ೯ಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಯಾಗಬೇಕು. ಪರೀಕ್ಷಾ ನೋಂದಣಿ ಸಂಖ್ಯೆ ವಿದ್ಯಾಥಿ೯ಗಳಿಗೆ ಗೋಚರವಾಗುವ ರೀತಿ ಪ್ರದಶ೯ನ ವಾಗಬೇಕು. ಈ ಬಾರಿ ಪರೀಕ್ಷೆ ಒ.ಎಮ್.ಆರ್ ಶೀಟ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ನೋಂದಣಿ ಸಂಖ್ಯೆ ಸರಿಯಾಗಿ ವಿದ್ಯಾಥಿ೯ ಗಳು ನಮೂದಿಸಿರುವ ಬಗ್ಗೆ ಪರೀಕ್ಷಾ ಮೇಲ್ವಿಚಾರಕರು ಪರಿಶೀಲಿಸುವಂತೆ ತಿಳಿಸಿದರು.


ಇದಲ್ಲದೇ ಮಳೆ ಇರುವ ಹಿನ್ನೆಲೆಯಲ್ಲಿ ವಿದ್ಯಾಥಿ೯ ಗಳು ಪರೀಕ್ಷಾ ಕೇಂದ್ರ ಗಳಿಗೆ ಬೇಗ ಆಗಮಿಸಿದರೆ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ಪರೀಕ್ಷೆ ಬರೆಯಲು ಡೆಸ್ಕ್ ಗಳು ಉತ್ತಮ ವಾಗಿರಬೇಕು. ಈ ಬಗ್ಗೆ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲಿಸಿಕೊಳ್ಳುವಂತೆ ಪರೀಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.


ಹೀಗಿವೆ.. ಎಸ್ ಎಸ್ ಎಲ್ ಸಿ ಪರೀಕ್ಷೆ -2021ಗೆ ವಿದ್ಯಾರ್ಥಿಗಳು ಅನುಸರಿಸಬೇಕಾದಂತ ಕೆಲವು ಪ್ರಮುಖ ಅಂಶಗಳು


1.ಪರೀಕ್ಷಾ ಕೇಂದ್ರದಲ್ಲಿ

  • ಪರೀಕ್ಷಾ ಕೇಂದ್ರಕ್ಕೆ ಪೂರ್ವಾಹ್ನ 8.30 ರೊಳಗಾಗಿ ಹಾಜರಾಗುವುದು.
  • ಕೊಠಡಿ ಸಂಖ್ಯೆಯನ್ನು ಸರಿಯಾಗಿ ಗಮನಿಸಿ ಮತ್ತು ಸದರಿ ಕೊಠಡಿಯಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಗುರುತಿಸಿ ಆಸೀನರಾಗಿ. ಒಂದು ವೇಳೆ ಗೊತ್ತಾಗದಿದ್ದರೆ ಪರೀಕ್ಷಾ ಕೇಂದ್ರದಲ್ಲಿರುವ ಅಧಿಕಾರಿಗಳನ್ನು ತಪ್ಪದೆ ಕೇಳಿ ತಿಳಿದುಕೊಳ್ಳುವುದು.
  • ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನ್ ಮಾಡುವುದರಿಂದ ಮುಂಚಿತವಾಗಿ ನಿಮ್ಮ ನಿಗದಿತ ಕೊಠಡಿಯತ್ತ ತೆರಳುವುದು.
  • ಪರೀಕ್ಷಾ ಕೇಂದ್ರದಲ್ಲಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. 

2. ಪರೀಕ್ಷಾ ಕೊಠಡಿ ಒಳಗಡೆಯಲ್ಲಿ

  • ನಿರ್ಭಯದಿಂದ ಪರೀಕ್ಷೆ ಬರೆಯಿರಿ ಮತ್ತು ಅನಾವಶ್ಯಕವಾಗಿ ಗಾಬರಿಯಾಗದಿರಿ.
  • ಏನಾದ್ರೂ ಸಮಸ್ಯೆಗಳಿದ್ದಲ್ಲಿ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳುವುದು.

3. ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಬೇಕಾದಂತ ದಾಖಲೆ, ವಸ್ತುಗಳು

  • ಪ್ರವೇಶ ಪತ್ರ
  • ನೀಲಿ ಅಥವಾ ಕಪ್ಪು ಬಾಲ್ ಪೆನ್
  • ಮಾಸ್ಕ್ (ಧರಿಸಿ ಬರುವುದು)
  • ಸ್ಯಾನಿಟೈಸರ್
  • ನೀರಿನ ಬಾಟಲ್

4. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಇವುಗಳನ್ನು ತಪ್ಪದೆ ಅನುಸರಿಸಿ

  • OMR ಶೀಟ್ ಗಳಲ್ಲಿ ನಿಮ್ಮ ಸಹಿ ಮಾಡುವ ಕಾಲಂನಲ್ಲಿ ತಪ್ಪದೇ ಸಹಿ ಮಾಡಿ.
  • ವೃತ್ತಗಳನ್ನು ಬ್ಲೂ / ಬ್ಲಾಕ್ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸಿ ಶೇಡ್ ಮಾಡಿ
  • ಮೊದಲು ಸರಿಯಾದ ಉತ್ತರವನ್ನು ಗುರುತಿಸಿಕೊಂಡು
  • ನಂತರ ಅದಕ್ಕೆ ಸಂಬಂದಿಸಿದ ವೃತ್ತವನ್ನು ಮಾತ್ರ ಶೇಡ್ ಮಾಡಿ
  • ವೃತ್ತವನ್ನು ಸಂಪೂರ್ಣವಾಗಿ ಶೇಡ್ ಮಾಡಿ
  • ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಮೊದಲು ಶೇಡ್ ಮಾಡುವುದು.
  • ಶೇಡ್ ಮಾಡುವಾಗ ಉತ್ತರಕ್ಕೆ ಸಂಬಂಧಿಸಿದ ವೃತ್ತವನ್ನೇ ಶೇಡ್ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ
  • ಈ ಪರೀಕ್ಷೆಯಲ್ಲಿ ತಪ್ಪಾದ ಉತ್ತರಗಳಿಗೆ Negitive ಅಂಕ ಇಲ್ಲದಿರುವ ಪ್ರಯುಕ್ತ ಕೊನೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೂ ಒಂದು ವೃತ್ತವನ್ನು ಆಯ್ಕೆ ಮಾಡಿ ಶೇಡ್ ಮಾಡಿ

5. ಯಾವುದೇ ವಿದ್ಯಾರ್ಥಿಗಳು ಈ ತಪ್ಪು ಮಾಡಬೇಡಿ

  • ಸರಿಯಾದ ಉತ್ತರವನ್ನು ಮೊದಲು ಗುರುತಿಸೊಣ ನಂತರ ಶೇಡ್ ಮಾಡೋಣ ಎಂದು ಕೊನೆಯ ಸಮಯದವರೆಗೆ ಶೇಡ್ ಮಾಡದೆ ಇರುವುದು
  • ಸಮಯದ ಅಭಾವದಿಂದ ಶೇಡ್ ಮಾಡದೆ ಬಿಟ್ಟು ಬರುವುದು.
  • OMR ಶೀಟ್ ಮೇಲೆ ಯಾವುದೇ ಚಿತ್ತು / ಬರಹ ಮಾಡಬಾರದು
  • OMR ಶೀಟ್ ಹರಿಯುವುದು / ಮಡಚುವುದು ಮಾಡಬಾರದು
  • ಉತ್ತರಿಸಿಲು √ (ಸರಿ) ಚಿಹ್ನೆ ಬಳಸಬಾರದು
  • ಉತ್ತರಿಸಿಲು × (ತಪ್ಪು) ಚಿಹ್ನೆ ಬಳಸಬಾರದು
  • ಉತ್ತರಿಸಿಲು ಇತರೆ ಚಿಹ್ನೆಗಳನ್ನು ಬಳಸಬಾರದು
  • ಒಂದಕ್ಕಿಂತ ಹೆಚ್ಚಿನ ವೃತ್ತಗಳನ್ನು ಶೇಡ್ ಮಾಡಬಾರದು

6. ಕೊರೋನಾ ಬಗ್ಗೆ ವಿದ್ಯಾರ್ಥಿಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

  • ಪರೀಕ್ಷಾ ಕೊಠಡಿಯಲ್ಲಿ ಹಾಗೂ ಹೊರಗೆ ಇರುವ ಎಲ್ಲಾ ಸಮಯದಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
  • ಪರೀಕ್ಷೆಯ ಮುನ್ನ ಮತ್ತು ನಂತರ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು.
  • ಪರೀಕ್ಷೆ ಮುಗಿದ ಕೂಡಲೇ ಪರೀಕ್ಷಾ ಕೇಂದ್ರವನ್ನು ಬಿಟ್ಟು ತಮ್ಮ ತಮ್ಮ ಮನೆಗಳನ್ನು ತೆರಳುವುದು.

7. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಅವಶ್ಯಕವಿಲ್ಲದ ವಸ್ತುಗಳು

  • ಕೈಗಡಿಯಾರ(ಡಿಜಿಟಲ್ ವಾಚ್/ಎಲೆಕ್ಟ್ರಾನಿಕ್ ವಾಚ್/ಸ್ಮಾರ್ಟ್ ವಾಚ್ ಇತ್ಯಾದಿ)
  • ಕ್ಯಾಲ್ಕುಲೇಟರ್/ಮೊಬೈಲ್/ಪೇಜರ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳು
  • ವೈಟ್ನರ್, ಬ್ಲೇಡ್ ಮುಂತಾದ ಪರೀಕ್ಷೆಗೆ ಅವಶ್ಯಕತೆ ಇಲ್ಲದ ಬೇರೆ ಯಾವುದೇ ವಸ್ತುಗಳು.

ಈ ಮೇಲ್ಕಂಡ ಕೆಲವು ಬಹುಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ವಿದ್ಯಾರ್ಥಿಗಳು ನಾಳೆ ಯಾವುದೇ ಭಯವಿಲ್ಲದೇ, ಪರೀಕ್ಷಾ ಕೇಂದ್ರಗಳಿಗೆ ತೆರಳಿ, ಧೈರ್ಯದಿಂದ ಪರೀಕ್ಷೆಯನ್ನು ಬರೆಯಿರಿ. ಈ ಮೂಲಕ ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಸರ್ಕಾರ ನಡೆಸುತ್ತಿರುವಂತ ಪರೀಕ್ಷೆಯಲ್ಲಿ, ನಿಮ್ಮ ಭವಿಷ್ಯವನ್ನು ಉತ್ತಮ ಅಂಕಗಳೊಂದಿಗೆ ಪಡೆದು ರೂಪಿಸಿಕೊಳ್ಳಿ ಎಂದು ಹೇಳುತ್ತಾ, ಈಗಿನ ಸುದ್ದಿ ತಂಡದಿಂದ ನಾಳೆ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.


Read more

Previous Post Next Post