ರಾಜ್ಯದಲ್ಲಿ ನಿನ್ನೆ ಪಾಸಿಟಿವಿಟಿ ದರ ಶೇಕಡ 0.96 , 1285 ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ನಿನ್ನೆ ಪಾಸಿಟಿವಿಟಿ ದರ ಶೇಕಡ 0.96 , 1285 ಜನರಿಗೆ ಸೋಂಕು ದೃಢ


ಬೆಂಗಳೂರು: ರಾಜ್ಯದಲ್ಲಿ ನಿನ್ನೆ (ಆ.02) ಪಾಸಿಟಿವಿಟಿ ದರ ಶೇಕಡ 0.96 ರಷ್ಟು ಇತ್ತು. 1383 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 25 ಸೋಂಕಿತರು ಮೃತಪಟ್ಟಿದ್ದಾರೆ. 24,021 ಸಕ್ರಿಯ ಪ್ರಕರಣಗಳಿದ್ದು, ಮತ್ತು ನಿನ್ನೆ 1,33,030 ಪರೀಕ್ಷೆ ನಡೆಸಲಾಗಿದೆ.


ಹೊಸದಾಗಿ 1285 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,08,284 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,612 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 28,47,627 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 6, ಬಳ್ಳಾರಿ 4, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 290, ಬೀದರ್ 3, ಚಾಮರಾಜನಗರ 17, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 36, ಚಿತ್ರದುರ್ಗ 18, ದಕ್ಷಿಣ ಕನ್ನಡ 219, ದಾವಣಗೆರೆ 4, ಧಾರವಾಡ 8, ಗದಗ 9, ಹಾಸನ 91, ಹಾವೇರಿ 1, ಕಲಬುರ್ಗಿ 5, ಕೊಡಗು 81, ಕೋಲಾರ 35, ಕೊಪ್ಪಳ 2, ಮಂಡ್ಯ 26, ಮೈಸೂರು 102, ರಾಯಚೂರು 1, ರಾಮನಗರ 3, ಶಿವಮೊಗ್ಗ 34, ತುಮಕೂರು 73, ಉಡುಪಿ 135, ಉತ್ತರಕನ್ನಡ 41, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 1 ಹೊಸ ಪ್ರಕರಣ ವರದಿಯಾಗಿದೆ.


أحدث أقدم