ತುಸು ನೆಮ್ಮದಿಯ ಸುದ್ದಿ: ಇಂದು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ, 1,186 ಪಾಸಿಟಿವ್, 1,776 ಗುಣಮುಖರು

ತುಸು ನೆಮ್ಮದಿಯ ಸುದ್ದಿ: ಇಂದು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ,  1,186 ಪಾಸಿಟಿವ್, 1,776 ಗುಣಮುಖರು

ಬೆಂಗಳೂರು : ಕೊರೋನಾ 3ನೇ ಅಲೆಯ ಭೀತಿಯಿಂದಾಗಿ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ, ಗಡಿ ಪ್ರದೇಶಗಳಲ್ಲಿ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಇಂದು 1,186 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಡುವ ಮೂಲಕ, ರಾಜ್ಯದ ಜನರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದೆ.


ಈ ಕುರಿತಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಹೊಸದಾಗಿ 1,186 ಜನರಿಗೆ ಕೊರೋನಾ ಸೋಂಕಿನ ಪ್ರಕರಣ ದೃಢಪಟ್ಟಿದೆ. ಇವರಲ್ಲಿ ಬೆಂಗಳೂರಿನಲ್ಲಿ 296 ಜನರಿಗೆ ಕೊರೋನಾ ಸೋಂಕಿನ ಪ್ರಕರಣಗಳು ( Covid19 Case ) ವರದಿಯಾಗಿದೆ ಎಂಬುದಾಗಿ ತಿಳಿಸಿದ್ದಾರೆ.


ಇನ್ನೂ ಇಂದು ಬೆಂಗಳೂರಿನಲ್ಲಿ 410 ಜನರು ಸೇರಿದಂತೆ ರಾಜ್ಯಾಧ್ಯಂತ 1,776 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ 8,378 ಸೇರಿದಂತೆ ರಾಜ್ಯಾಧ್ಯಂತ 23,316 ಸಕ್ರೀಯ ಸೋಂಕಿತರು ಇದ್ದಾರೆ. ಇಂದು 1,32,192 ಜನರನ್ನು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.


ಅಂದಹಾಗೇ ಸೋಂಕಿನ ಪ್ರಮಾಣ ಕಡಿಮೆಯಾದಂತೆ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಒಬ್ಬರು ಸೇರಿದಂತೆ ರಾಜ್ಯಾಧ್ಯಂತ ಸೋಂಕಿನಿಂದಾಗಿ 24 ಜನರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.0.89 ರಷ್ಟು ಇದೆ ಎಂದು ತಿಳಿಸಿದ್ದಾರೆ.

أحدث أقدم