ರಾಜ್ಯದಲ್ಲಿ ಇಂದು 1262 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.70

ರಾಜ್ಯದಲ್ಲಿ ಇಂದು 1262 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.70 


ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1262 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 17 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ವರದಿಗಳ ಪ್ರಕಾರ ಇಂದು 1384 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 28,91,193 ಜನ ಗುಣಮುಖರಾಗಿದ್ದಾರೆ.


ಇನ್ನು ರಾಜ್ಯದಲ್ಲಿ 18,758 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.70 ರಷ್ಟಿದ್ದು, ಡೆತ್ ರೇಟ್ 1.34 % ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ -1, ಬಳ್ಳಾರಿ- 3, ಬೆಳಗಾವಿ-34, ಬೆಂಗಳೂರು ಗ್ರಾಮಾಂತರ -9, ಬೆಂಗಳೂರು ನಗರ-361, ಬೀದರ್ 0, ಚಾಮರಾಜನಗರ-13, ಚಿಕ್ಕಬಳ್ಳಾಪುರ- 0, ಚಿಕ್ಕಮಗಳೂರು-26, ಚಿತ್ರದುರ್ಗ-22, ದಕ್ಷಿಣ ಕನ್ನಡ-202,ದಾವಣಗೆರೆ-28, ಧಾರವಾಡ- 6, ಗದಗ-0,ಹಾಸನ-72, ಹಾವೇರಿ 5, ಕಲಬುರ್ಗಿ 5, ಕೊಡಗು-86 ಕೊಪ್ಪಳ 1, ಕೋಲಾರ 54, ಮಂಡ್ಯ-14, ಮೈಸೂರು 86, ರಾಯಚೂರು 1, ರಾಮನಗರ 1, ಶಿವಮೊಗ್ಗ 59, ತುಮಕೂರು 34, ಉಡುಪಿ 96, ಉತ್ತರಕನ್ನಡ 42, ವಿಜಯಪುರ- 1, ಯಾದಗಿರಿ- 0 



ಕೇರಳದಲ್ಲಿ ಇಂದು 29,836 ಪಾಸಿಟಿವ್, ಟೆಸ್ಟ್ ಪಾಸಿಟಿವಿಟಿ 19.67%

ಕೇರಳದಲ್ಲಿ ಇಂದು 29,836 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,51,670 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 19.67% ಇದೆ. ಚಿಕಿತ್ಸೆಯಲ್ಲಿದ್ದ 22,088 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,12,566 ಸಕ್ರಿಯ ಪ್ರಕರಣಗಳು ಇವೆ.
أحدث أقدم