ಮೂರು ಜಿಲ್ಲೆಗಳಲ್ಲಿ ಕೊರೊನಾ ಶೂನ್ಯ, ಇಂದು ರಾಜ್ಯದಲ್ಲಿ 1674 ಕೊರೊನ ದೃಢ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಮೂರು ಜಿಲ್ಲೆಗಳಲ್ಲಿ ಕೊರೊನಾ ಶೂನ್ಯ, ಇಂದು ರಾಜ್ಯದಲ್ಲಿ 1674 ಕೊರೊನ ದೃಢ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್


ಬೆಂಗಳೂರು: ರಾಜ್ಯದಲ್ಲಿ ಇಂದು 1674 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,09,958 ಕ್ಕೆ ಏರಿಕೆಯಾಗಿದೆ.


ಇದುವರೆಗೆ 36,650 ಸೋಂಕಿತರು ಸಾವನ್ನಪ್ಪಿದ್ದಾರೆ. 28,49,003 ಜನ ಗುಣಮುಖರಾಗಿದ್ದಾರೆ. ಇಂದು 1376 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 38 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.38 ರಷ್ಟು ಇದೆ. ರಾಜ್ಯದಲ್ಲಿ 24,280 ಸಕ್ರಿಯ ಪ್ರಕರಣಗಳು ಇದ್ದು, ಇವತ್ತು 1,21,021 ಪರೀಕ್ಷೆ ನಡೆಸಲಾಗಿದೆ.


ಜಿಲ್ಲೆಗಳ ವಿವರ:

ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 36, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 477, ಬೀದರ್ 0, ಚಾಮರಾಜನಗರ 19, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 61, ಚಿತ್ರದುರ್ಗ 15, ದಕ್ಷಿಣ ಕನ್ನಡ 307, ದಾವಣಗೆರೆ 12, ಧಾರವಾಡ 9, ಗದಗ 3, ಹಾಸನ 104, ಹಾವೇರಿ 1, ಕಲಬುರಗಿ 3, ಕೊಡಗು 94, ಕೋಲಾರ 17, ಕೊಪ್ಪಳ 4, ಮಂಡ್ಯ 44, ಮೈಸೂರು 147, ರಾಯಚೂರು 0, ರಾಮನಗರ 11, ಶಿವಮೊಗ್ಗ 26, ತುಮಕೂರು 80, ಉಡುಪಿ 104, ಉತ್ತರಕನ್ನಡ 60, ವಿಜಯಪುರ 4, ಯಾದಗಿರಿ 0.



ಕೇರಳದಲ್ಲಿ ಇಂದು 23,676 ಪಾಸಿಟಿವ್, 15,626 ಗುಣಮುಖರು


ಕೇರಳದಲ್ಲಿ ಇಂದು 23,676 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,99,456 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 11.87% ಇದೆ. ಚಿಕಿತ್ಸೆಯಲ್ಲಿದ್ದ 15,626 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,73,221 ಸಕ್ರಿಯ ಪ್ರಕರಣಗಳು ಇವೆ.

Previous Post Next Post