ರಾಜ್ಯದಲ್ಲಿ ಇಂದು ಪಾಸಿಟಿವಿಟಿ ದರ ಭಾರಿ ಇಳಿಕೆ, 1,79,016 ಪರೀಕ್ಷೆ, 1365 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.76

ರಾಜ್ಯದಲ್ಲಿ ಇಂದು ಪಾಸಿಟಿವಿಟಿ ದರ ಭಾರಿ ಇಳಿಕೆ, 1,79,016 ಪರೀಕ್ಷೆ, 1365 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.76


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1365 ಜನರಿಗೆ ಸೋಂಕು ತಗುಲಿದೆ. 1558 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


22 ಸೋಂಕಿತರು ಮೃತಪಟ್ಟಿದ್ದಾರೆ. 21,266 ಸಕ್ರಿಯ ಪ್ರಕರಣಗಳು ಇವೆ. ಇಂದು 1,79,016 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.76 ರಷ್ಟು ಇದೆ.


ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಅತಿಹೆಚ್ಚು ಮಂದಿಯಲ್ಲಿ (268) ಸೋಂಕು ವರದಿಯಾಗಿದೆ. ಉಳಿದಂತೆ ಬೆಂಗಳೂರು ನಗರ 327, ಮೈಸೂರು 123, ಹಾಸನ 107, ಉಡುಪಿ 97, ಕೊಡಗು 86, ತುಮಕೂರು 52, ಉತ್ತರ ಕನ್ನಡ 51, ಚಿಕ್ಕಮಗಳೂರು 47, ಶಿವಮೊಗ್ಗ 45, ಬೆಳಗಾವಿ 37, ಮಂಡ್ಯ 25, ಕೋಲಾರ 21, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕಲಬುರಗಿ, ದಾವಣಗೆರೆ ತಲಾ 11, ಧಾರವಾಡ 10, ಚಾಮರಾಜನಗರ 7, ರಾಯಚೂರು 5, ಚಿಕ್ಕಬಳ್ಳಾಪುರ 4, ಬಾಗಲಕೋಟೆ, ಬಳ್ಳಾರಿ, ಬೀದರ್ 2, ಗದಗ, ಹಾವೇರಿ, ವಿಜಯಪುರ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.


Read More

أحدث أقدم