ಕಳೆದ 24 ಗಂಟೆಯಲ್ಲಿ ದೇಶದಲ್ಲಿ 45,083 ಪಾಸಿಟಿವ್ ಕೇಸ್ ಪತ್ತೆ, ಅದರಲ್ಲಿ 31ಸಾವಿರ ಕೇರಳದಲ್ಲೇ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 45,083 ಪಾಸಿಟಿವ್ ಕೇಸ್ ಪತ್ತೆ, ಅದರಲ್ಲಿ 31ಸಾವಿರ ಕೇರಳದಲ್ಲೇ 


ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,083 ಕೊರೊನಾ ಕೇಸ್ ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈ ಮಧ್ಯೆ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ.97.5ರಷ್ಟಿದೆ. ಹಾಗೇ, 24ಗಂಟೆಯಲ್ಲಿ 460 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 35,840 ಜನರು ಚೇತರಿಸಿಕೊಂಡು, ಡಿಸ್​ಚಾರ್ಜ್ ಆಗಿದ್ದಾರೆ.ಇದೀಗ ದೇಶದಲ್ಲಿ 3,68,558 ಕೊರೊನಾ ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


ಸದ್ಯ ದೇಶದಲ್ಲಿ ಕೇರಳದಲ್ಲಿ ಕೊರೊನಾ ಅತ್ಯಂತ ಹೆಚ್ಚಾಗಿ ಬಾಧಿಸುತ್ತಿದೆ. ಕಳೆದ 24ಗಂಟೆಯಲ್ಲಿ ಬರೋಬ್ಬರಿ 31,265 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 153 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪತ್ತೆಯಾದ ಒಟ್ಟೂ ಕೊರೊನಾ ಕೇಸ್​​ನಲ್ಲಿ ಮುಕ್ಕಾಲು ಭಾಗ ಕೇರಳದಲ್ಲೇ ಆಗಿದೆ. ಅಲ್ಲೀಗ ನೈಟ್​ ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಕಠಿಣ ಕರ್ಫ್ಯೂ ನಿಯಮಗಳು ಅನ್ವಯವಾಗುತ್ತವೆ.


ದೇಶಾದ್ಯಂತ ಇದುವರೆಗೆ 63 ಕೋಟಿ ಲಸಿಕೆ ವಿತರಣೆ 


ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 73.85 ಲಕ್ಷ ಡೋಸ್‌ ಲಸಿಕೆ ನೀಡುವುದರೊಂದಿಗೆ ಇದುವರೆಗೆ ಲಸಿಕೆ ವಿತರಣೆ ಪ್ರಮಾಣ 63 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.


ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಸುಮಾರು 63,09,17,927 ಡೋಸ್‌ ಲಸಿಕೆಗಳನ್ನು ವಿವಿಧ ಮೂಲಗಳಿಂದ ಒದಗಿಸಲಾಗಿದೆ ಎಂದು ತಿಳಿಸಿದೆ.


ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 45,083 ಹೊಸ ಕೇಸ್ ಪತ್ತೆಯಾಗಿದ್ದು 460 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ

Previous Post Next Post