ಕೇರಳದಲ್ಲಿ ಕೊರೊನ ಬಾರಿ ಏರಿಕೆ, ಇಂದು 31,445 ಪಾಸಿಟಿವ್, ಪಾಸಿಟಿವ್ ದರ 19.03%

ಕೇರಳದಲ್ಲಿ ಕೊರೊನ ಬಾರಿ ಏರಿಕೆ, ಇಂದು 31,445 ಪಾಸಿಟಿವ್, ಪಾಸಿಟಿವ್ ದರ 19.03%


ತಿರುವನಂತಪುರ:
 ಕೇರಳದಲ್ಲಿ ಕೋವಿಡ್ ಪ್ರಕರಣ ಬುಧವಾರ ಭಾರಿ ಏರಿಕೆ ಕಂಡಿದ್ದು, ಒಂದೇ ದಿನ 31,445 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 215 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 19 ದಾಟಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.


ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 38,83,429 ತಲುಪಿದೆ. ಇಂದಿನ ವರೆಗೆ 19,972 ಸೋಂಕಿತರು ಅಸುನೀಗಿದ್ದಾರೆ. ಈ ಹಿಂದೆ ಮೇ 20ರಂದು ಕೇರಳದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರ ದಾಟಿತ್ತು. 


ಬುಧವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 20,271 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 36,92,628 ಮಂದಿ ಗುಣಮುಖರಾದಂತಾಗಿದೆ. ಸದ್ಯ ಕೇರಳದಲ್ಲಿ 1,70,292 ಸಕ್ರಿಯ ಪ್ರಕರಣಗಳಿವೆ.


24 ಗಂಟೆ ಅವಧಿಯಲ್ಲಿ 1,65,273 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 3,06,19,046 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Previous Post Next Post