ರಾಜ್ಯದಲ್ಲಿ ಕೊರೊನ ಇಳಿಮುಖ, ಇಂದು 973 ಪಾಸಿಟಿವ್, ಪಾಸಿಟಿವಿಟಿ ದರ 0.64 %

ರಾಜ್ಯದಲ್ಲಿ ಕೊರೊನ ಇಳಿಮುಖ, ಇಂದು 973 ಪಾಸಿಟಿವ್, ಪಾಸಿಟಿವಿಟಿ ದರ 0.64 %

ಬೆಂಗಳೂರು :
 ರಾಜ್ಯದಲ್ಲಿ ಬಹುದಿನಗಳ ನಂತರ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ 1000 ಕ್ಕಿಂತ ಕಡಿಮೆ ಪತ್ತೆಯಾಗಿವೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.30) ಸಂಜೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ 973 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ 15 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.


ವರದಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ 1324 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2892517 ತಲುಪಿದೆ.


ಇನ್ನು ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 18392 ಇದೆ. ಪಾಸಿಟಿವಿಟಿ ದರ 0.64 % ಹಾಗೂ ಡೆತ್ ರೇಟ್ 1.54 % ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-18, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-264, ಬೀದರ್-0, ಚಾಮರಾಜನಗರ-9, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-14, ಚಿತ್ರದುರ್ಗ-10, ದಕ್ಷಿಣ ಕನ್ನಡ-193, ದಾವಣಗೆರೆ-5, ಧಾರವಾಡ-6, ಗದಗ-1, ಹಾಸನ-74, ಹಾವೇರಿ-1, ಕಲಬುರಗಿ-1, ಕೊಡಗು-42, ಕೋಲಾರ-38, ಕೊಪ್ಪಳ-2, ಮಂಡ್ಯ-10, ರಾಯಚೂರು-0, ರಾಮನಗರ-4, ಶಿವಮೊಗ್ಗ-38, ತುಮಕೂರು-21, ಉಡುಪಿ-98, ಉತ್ತರ ಕನ್ನಡ-39, ವಿಜಯಪುರ-0, ಯಾದಗಿರಿ-1.

أحدث أقدم