ರಾಜ್ಯದಲ್ಲಿ ಇಂದು 1117 ಪಾಸಿಟಿವ್, 1354 ಗುಣಮುಖರು, ಟಿಪಿಆರ್ 0.71%

ರಾಜ್ಯದಲ್ಲಿ ಇಂದು 1117 ಪಾಸಿಟಿವ್,  1354 ಗುಣಮುಖರು, ಟಿಪಿಆರ್ 0.71%


ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಒಟ್ಟು 1117 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. 1354 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಮತ್ತು ಸೋಂಕಿನಿಂದ ಮೃತಪಡುವವರ ಸರಾಸರಿ ತಲಾ ಶೇ 0.71 ಇದೆ. ರಾಜ್ಯದಲ್ಲಿ ಒಟ್ಟು 17,501 ಸಕ್ರಿಯ ಪ್ರಕರಣಗಳಿವೆ. 

ಕರ್ನಾಟಕದಲ್ಲಿ ಈವರೆಗೆ ಒಟ್ಟು 29,55,164 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 29,00,228 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 37,409 ಮಂದಿ ನಿಧನರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 358 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. 530 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ನಗರದಲ್ಲಿ ಒಟ್ಟು 12,39,481 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,16,251 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,024 ಮಂದಿ ಸಾವನ್ನಪ್ಪಿದ್ದಾರೆ.


ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 358, ದಕ್ಷಿಣ ಕನ್ನಡ 183, ಉಡುಪಿ 130, ಕೊಡಗು 62, ಮೈಸೂರು 59, ಶಿವಮೊಗ್ಗ, ಹಾಸನ 48, ಉತ್ತರ ಕನ್ನಡ 47, ಚಿಕ್ಕಮಗಳೂರು 36, ಕೋಲಾರ 30, ತುಮಕೂರು 28, ಮಂಡ್ಯ 25, ಬೆಳಗಾವಿ 20, ದಾವಣಗೆರೆ 10, ಬೆಂಗಳೂರು ಗ್ರಾಮಾಂತರ 7, ಧಾರವಾಡ, ಕೊಪ್ಪಳ 5, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ 4, ಬಳ್ಳಾರಿ, ಚಾಮರಾಜನಗರ 2 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.


أحدث أقدم