ರಾಜ್ಯದಲ್ಲಿ ಇಂದು 1240 ಪಾಸಿಟಿವ್, ಟಿಪಿಆರ್ 0.74%

ರಾಜ್ಯದಲ್ಲಿ ಇಂದು 1240 ಪಾಸಿಟಿವ್, ಟಿಪಿಆರ್ 0.74%


ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1240 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ ಹಾಗೂ 22 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.02)ಸಂಜೆ ಬಿಡುಗಡೆ ಮಾಡಿದೆ.

ವರದಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ 1252 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2896079 ತಲುಪಿದೆ. ಇನ್ನೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18378 ಇದೆ.ಪಾಸಿಟಿವಿಟಿ ದರ 0.74% ಹಾಗೂ ಡೆತ್‌ ರೇಟ್‌1.77% ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ
ಬೆಂಗಳೂರು ನಗರ 319, ದಕ್ಷಿಣ ಕನ್ನಡ 264, ಉಡುಪಿ 111, ಮೈಸೂರು 88, ಹಾಸನ 76, ಬೆಳಗಾವಿ49, ತುಮಕೂರು35, ಶಿವಮೊಗ್ಗ 32, ಉತ್ತರ ಕನ್ನಡ 42, ಮಂಡ್ಯ 29, ಕೋಲಾರ 32, ಕೊಡಗು 52, ಧಾರವಾಡ 17, ಚಿತ್ರದುರ್ಗ 11, ಚಿಕ್ಕಮಗಳೂರು26, ಚಾಮರಾಜನಗರ 13, ಬೆಂಗಳೂರು ಗ್ರಾಮಾಂತರ 15, ಬಳ್ಳಾರಿ7, ಬಾಗಲಕೋಟೆ 1, ಬೀದರ್‌ 0, ಚಿಕ್ಕಬಳ್ಳಾಪುರ 0, ದಾವಣಗೆರೆ 6, ಗದಗ 1, ಹಾವೇರಿ 0, ಕಲಬುರಗಿ 3, ಕೊಪ್ಪಳ 5, ರಾಯಚೂರು2, ರಾಮನಗರ1, ವಿಜಯಪುರ 2' ಯಾದಗಿರಿ 1.



ಕೇರಳದಲ್ಲಿ ಇಂದು 32,097 ಪಾಸಿಟಿವ್, ಟಿಪಿಆರ್ 18.41%


ಕೇರಳದಲ್ಲಿ ಇಂದು 32,097 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,74,307 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 18.41% ಇದೆ. ಚಿಕಿತ್ಸೆಯಲ್ಲಿದ್ದ 21,634 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,40,186 ಸಕ್ರಿಯ ಪ್ರಕರಣಗಳು ಇವೆ.
أحدث أقدم