ಆ ಪ್ರಕಾರ ನಾಳೆಯಿಂದ ರಾಜಾದ್ಯಂತ ಶಾಲೆಯ ಘಂಟೆ ಬಾರಿಸಲಿದ್ದು, 6-8ನೆ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗ್ತಿವೆ. ಮೊದಲ ಹಂತದಲ್ಲಿ 9-12 ನೆ ತರಗತಿಗಳನ್ನ ಪ್ರಾರಂಭ ಮಾಡಿದ್ದ ಸರ್ಕಾರ ಇಗ ಬರೋಬ್ಬರಿ 18 ತಿಂಗಳುಗಳ ಬಳಿಕ ಮಾಧ್ಯಮಿಕ ತರಗತಿಗಳ ಭೌತಿಕ ಕ್ಲಾಸ್ ಆರಂಭ ಮಾಡ್ತಿದ್ದು ವಿದ್ಯಾರ್ಥಿಗಳು ಶಾಲಾ ಅಂಗಳಕ್ಕಿಳಿಯಲು ಸಜ್ಜಾಗಿದ್ದಾರೆ.
6-8 ಭೌತಿಕ ತರಗತಿ ಆರಂಭಕ್ಕೆ ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಶಿಕ್ಷಣ ಇಲಾಖೆ, ಕೆಲವು ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದೆ.
- ವಿದ್ಯಾರ್ಥಿಗಳು ಊಟದ ಬಾಕ್ಸ್ ಮತ್ತು ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಬರಬೇಕು.
- ಶಾಲೆಯಲ್ಲೂ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
- ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಲಿರುವ ತರಗತಿಗಳು.
- ಕೊವಿಡ್ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭಕ್ಕೆ ಸಿದ್ಧತೆ .
- ವಾರದಲ್ಲಿ 5 ದಿನ ಮಾತ್ರ ತರಗತಿ ನಡೆಸುವುದಕ್ಕೆ ಅವಕಾಶ.
- ಶೇಕಡಾ 50ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು.
- ವಿದ್ಯಾರ್ಥಿಗಳು ದಿನ ಬಿಟ್ಟು ದಿನ ತರಗತಿಗೆ ಹಾಜರಾಗಬೇಕು.
- ಶನಿವಾರ, ಭಾನುವಾರ ಶಾಲೆ ಸ್ವಚ್ಛಗೊಳಿಸಲು ಅವಕಾಶ.
- ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ.
- ಆನ್ಲೈನ್, ಪರ್ಯಾಯ ವಿಧಾನದಲ್ಲೂ ಹಾಜರಾಗಬಹುದು.
- ಅಂತರ ಕಾಪಾಡುವುದಕ್ಕೆ ಮಕ್ಕಳ ತಂಡ ರಚಿಸಲು ಸೂಚನೆ.
- ಕೋವಿಡ್-19 'ಪ್ರಮಾಣಿತ ಕಾರ್ಯಾಚರಣೆ ವಿಧಾನ'ಗಳ ಕಡ್ಡಾಯ ಪಾಲಿನೆ.
ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಕೋವಿಡ್ ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕು/ ವಲಯದಲ್ಲಿ ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ, ಶಾಲಾ ಆವರಣದಲ್ಲಿ ಸ್ಯಾನಿಟೈಜೇಶನ್ ಸೇರಿದಂತೆ ಶಾಲೆ ಓಪನ್ ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.