ಲಸಿಕೆ ಅಭಿಯಾನದಲ್ಲಿ ಭಾರತದ ಮೈಲಿಗಲ್ಲು, 75 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡಿ ದಾಖಲೆ ನಿರ್ಮಾಣ

ಲಸಿಕೆ ಅಭಿಯಾನದಲ್ಲಿ ಭಾರತದ ಮೈಲಿಗಲ್ಲು, 75 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡಿ ದಾಖಲೆ ನಿರ್ಮಾಣ

ಕೊರೊನಾ ಲಸಿಕೆ ಆಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದು, ದೇಶದಲ್ಲಿ ಇಲ್ಲಿಯವರೆಗೆ 75 ಕೋಟಿ ಕೋವಿಡ್ ಲಸಿಕೆ ಡೋಸ್ʼಗಳನ್ನ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಹೇಳಿದರು.

ಇದರ ನಂತರ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಅವರು ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ದೇಶವನ್ನ ಅಭಿನಂದಿಸಿದರು.


'ಕೋವಿಡ್-19 ಲಸಿಕೆಯನ್ನ ಅಭೂತಪೂರ್ವ ವೇಗದಲ್ಲಿ ಹೆಚ್ಚಿಸಿದ್ದಕ್ಕಾಗಿ ಡಬ್ಲ್ಯೂಹೆಚ್‌ಒ ಭಾರತವನ್ನು ಅಭಿನಂದಿಸಿದೆ. ಮೊದಲ 100 ಮಿಲಿಯನ್ ಡೋಸ್ʼಗಳನ್ನು ನೀಡಲು 85 ದಿನಗಳು ತೆಗೆದುಕೊಂಡರೂ, ಭಾರತವು ಕೇವಲ 13 ದಿನಗಳಲ್ಲಿ 650 ದಶಲಕ್ಷದಿಂದ 750 ದಶಲಕ್ಷ ಡೋಸ್ʼಗಳನ್ನು ತಲುಪಿದೆ' ಎಂದು ಸಿಂಗ್ ಹೇಳಿದರು.



Previous Post Next Post