ರಾಜ್ಯದಲ್ಲಿ ಕೊರೊನ ಇಳಿಮುಖ, ನಾಲ್ಕು ಜಿಲ್ಲೆಗಳಲ್ಲಿ ಶೂನ್ಯ, ಇಂದು 851 ಪಾಸಿಟಿವ್

ರಾಜ್ಯದಲ್ಲಿ ಕೊರೊನ ಇಳಿಮುಖ, ನಾಲ್ಕು ಜಿಲ್ಲೆಗಳಲ್ಲಿ ಶೂನ್ಯ, ಇಂದು 851 ಪಾಸಿಟಿವ್ 


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 851 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,56,988ಕ್ಕೆ ಏರಿಕೆಯಾಗಿದೆ.


ಮಹಾಮಾರಿಗೆ ಇಂದು 15 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,441ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.


ರಾಜ್ಯದಲ್ಲಿ ಇಂದು 790 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,02,089ಕ್ಕೆ ಏರಿಕೆಯಾಗಿದೆ. ಇನ್ನು17,432 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,18,791 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 851 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.71ಕ್ಕೆ ಇಳಿದಿದೆ.


ರಾಜ್ಯದ ನಾಲ್ಕು ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. 


ಜಿಲ್ಲಾವಾರು ಸೋಂಕಿತರ ವಿವರ:

ಬೆಂಗಳೂರು ನಗರ 248, ದಕ್ಷಿಣಕನ್ನಡ 227, ಚಿಕ್ಕಮಗಳೂರು 49, ಕೊಡಗು 31, ಮೈಸೂರು 53, ತುಮಕೂರು 44, ಉಡುಪಿ 74 ಹೊಸ ಪ್ರಕರಣ ವರದಿಯಾಗಿದೆ. ಬಾಗಲಕೋಟೆ 0, ಬಳ್ಳಾರಿ 3, ಬೀದರ್ 1, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 4, ಧಾರವಾಡ 0, ಗದಗ 0, ಹಾವೇರಿ 1, ಕಲ್ಬುರ್ಗಿ 3, ಕೊಪ್ಪಳ 0, ರಾಯಚೂರು 2, ರಾಮನಗರ 1, ವಿಜಯಪುರ 0, ಯಾದಗಿರಿ 1 ಪ್ರಕರಣ ವರದಿಯಾಗಿದೆ.


Previous Post Next Post