ಇಂದು 983 ಪಾಸಿಟಿವ್, ರಾಜ್ಯದಲ್ಲಿ ಇನ್ನು 17,746 ಸಕ್ರಿಯ ಪ್ರಕರಣಗಳು

ಇಂದು 983 ಪಾಸಿಟಿವ್, ರಾಜ್ಯದಲ್ಲಿ ಇನ್ನು 17,746 ಸಕ್ರಿಯ ಪ್ರಕರಣಗಳು

ಬೆಂಗಳೂರು
: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 983 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗಲಿದ್ದು, 21 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ 1620 ಜನ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.61% ರಷ್ಟು ಇದೆ. 17,746 ಸಕ್ರಿಯ ಪ್ರಕರಣಗಳು ಇವೆ. 


ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 289 ಜನರಿಗೆ ಸೋಂಕು ತಗುಲಿದ್ದು, 7 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 618 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7382 ಸಕ್ರಿಯ ಪ್ರಕರಣಗಳಿವೆ.


ಜಿಲ್ಲಾವಾರು ಕೋವಿಡ್ ಅಂಕಿ ಅಂಶಗಳು :

ಬಾಗಲಕೋಟೆ : 1, ಬಳ್ಳಾರಿ: 2, ಬೆಳಗಾವಿ : 33, ಬೆಂಗಳೂರು ಗ್ರಾಮಾಂತರ : 5, ಬೀದರ್ : 1, ಚಾಮರಾಜನಗರ : 10, ಚಿಕ್ಕಬಳ್ಳಾಪುರ: 3 , ಚಿಕ್ಕಮಗಳೂರು : 32 , ಚಿತ್ರದುರ್ಗ: 4, ದಕ್ಷಿಣ ಕನ್ನಡ : 162 , ದಾವಣಗೆರೆ: 1 , ಧಾರವಾಡ : 5 , ಗದಗ :0 , ಹಾಸನ: 62 , ಹಾವೇರಿ: 1 ,ಕಲಬುರಗಿ : 7 , ಕೊಡಗು: 16 , ಕೋಲಾರ : 17 , ಕೊಪ್ಪಳ : 2 , ಮಂಡ್ಯ: , ಮೈಸೂರು : 17 , ರಾಯಚೂರು ; 0 , ರಾಮನಗರ : 0 , ಶಿವಮೊಗ್ಗ: 56 , ತುಮಕೂರು : 41 , ಉಡುಪಿ ; 97 , ಉತ್ತರ ಕನ್ನಡ : 29 , ವಿಜಯಪುರ :1 , ಯಾದಗಿರಿ: 0

Previous Post Next Post