ಇಂದಿನಿಂದ ಮಂಗಳೂರು - ಕಾಸರಗೋಡು ಬಸ್ ಸಂಚಾರ ಪುನರಾರಂಭ

ಇಂದಿನಿಂದ ಮಂಗಳೂರು - ಕಾಸರಗೋಡು ಬಸ್ ಸಂಚಾರ ಪುನರಾರಂಭ

ಕಾಸರಗೋಡು:
 ಕೋವಿಡ್ ನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ನಿಲುಗಡೆಗೊಂಡಿದ್ದ ಕಾಸರಗೋಡು - ಮಂಗಳೂರು ಬಸ್ ಸೇವೆ ಇಂದಿನಿಂದ (ಶುಕ್ರವಾರದಿಂದ) ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಕೇರಳದ ಎಲ್ಲಾ ಸರಕಾರಿ ಬಸ್ ಗಳು ಮಂಗಳೂರಿಗೆ ಸಂಚಾರ ನಡೆಸುತ್ತಿವೆ.

ಕೇರಳದಲ್ಲಿ ಕೊರೋನಾ ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ಆರ್ ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವನ್ನು ಹಿಂತೆಗೆದುಕೊಳ್ಳಲಾಗಿದೆ.


ಕಾಸರಗೋಡಿಗರು ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಾಗಿ ಮಂಗಳೂರನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಮಂಗಳೂರಿಗೆ ಬಸ್ ಸಂಚಾರ ಆರಂಭಗೊಂಡಿರುವುದು ಕಾಸರಗೋಡಿಗರಿಗೆ ಸಾಕಷ್ಟು ಅನುಕೂಲವಾಗಲಿದೆ.

أحدث أقدم