ಸುನ್ನಿ ಸಾಹಿತ್ಯ ಪ್ರಶಸ್ತಿಗೆ ಸೈಯದ್ ಹಬೀಬುಲ್ಲಾ ತಂಙಳ್ ಆಯ್ಕೆ

ಸುನ್ನಿ ಸಾಹಿತ್ಯ ಪ್ರಶಸ್ತಿಗೆ ಸೈಯದ್ ಹಬೀಬುಲ್ಲಾ ತಂಙಳ್ ಆಯ್ಕೆ 


ಸ್ಲಾಮೀ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಹಿತಿಗಳಿಗೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೀಡುವ ಪ್ರತಿಷ್ಟಿತ 'ಸುನ್ನಿ ಸಾಹಿತ್ಯ ಪ್ರಶಸ್ತಿ'ಗೆ ಸೈಯದ್ ಹಬೀಬುಲ್ಲಾ ತಙಳ್ ಪೆರುವಾಯಿ ಆಯ್ಕೆಯಾಗಿದ್ದಾರೆ.


ಪವಿತ್ರ ಕುರ್ ಆನ್ ಸಂಪೂರ್ಣ ಕನ್ನಡಾನುವಾದ, ಕುರ್ ಆನ್ ಮತ್ತು ವಿಜ್ಞಾನ ಸೇರಿದಂತೆ ಇಪ್ಪತ್ತು ಮೌಲಿಕ ಗ್ರಂಥಗಳನ್ನು  ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿ ಇರುವುದನ್ನು ಪರಿಗಣಿಸಿ ಆಯ್ಕೆ ಸಮಿತಿಯು ಸೈಯದ್ ಹಬೀಬುಲ್ಲಾ ತಙಳರ ಹೆಸರನ್ನು ಆಯ್ಕೆಗೆ ಅಂತಿಮ ಗೊಳಿಸಿದೆ. 


ನವೆಂಬರ್ 8ರಂದು ಕೃಷ್ಣಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರತಿಭೋತ್ಸವದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ಇಪ್ಪತ್ತು ಸಾವಿರ ರೂ ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ

Previous Post Next Post