ಶಾಫಿ ಸಅದಿ ವಖಫ್ ಮಂಡಳಿ ಅಧ್ಯಕ್ಷರಾಗಿರುವುದು ಹೆಮೆಯ ವಿಚಾರ: ವಖಫ್ ಸಚಿವೆ ಶಶಿಕಲಾ ಜೊಲ್ಲೆ
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಸಚಿವೆ, ಇಂದು ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾಗಿರುವ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಶಾಫಿ ಸಅದಿ ಅವರಿಗೆ ಹೂಗುಚ್ಛ ನೀಡಿ, ಅಭಿನಂದನೆ ಸಲ್ಲಿಸಲಾಯಿತು.
'ಕರ್ನಾಟಕದ ಇತಿಹಾಸದಲ್ಲೇ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ' ಎಂದು ಹೇಳಿಕೊಂಡಿದ್ದಾರೆ.