ಇಹ್ಸಾನ್ ಕರ್ನಾಟಕ- (IFA) ಸೆಂಟರ್ ಲೋಕಾರ್ಪಣೆ ಇಂದು

ಇಹ್ಸಾನ್ ಕರ್ನಾಟಕ- (IFA) ಸೆಂಟರ್ ಲೋಕಾರ್ಪಣೆ ಇಂದು

ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿರುವ ಇಹ್ಸಾನ್ ಕರ್ನಾಟಕ ಇದರ ಸೌದಿ ಅರೇಬಿಯಾ KCF ಅಲ್ ಖಸೀಮ್ ಝೋನ್ ಪ್ರಾಯೋಜಕತ್ವದ  ಕೊಪ್ಪಳ ಜಿಲ್ಲೆಯ ಕಾರಟಗಿ ಸೆಂಟರ್ ಉದ್ಘಾಟನೆಯು ಇಹ್ಸಾನ್ ಕರ್ನಾಟಕ ಚೆಯರ್ಮಾನ್ ಶಾಫಿ ಸಅದಿ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 04 ಇಂದು ನಡೆಯಲಿದೆ. 


ಕನಕಗಿರಿ ಶಾಸಕ ಶ್ರೀ ಸನ್ಮಾನ್ಯ ಬಸವರಾಜ ಧಡೇಸುಗೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  


ಇಹ್ಸಾನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಾಫಿಲ್ ಸಅದಿ ಕೊಡಗು, ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ರು ಶೇಖ್ ಬಾವ ಹಾಜಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರು ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ, ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ ನಾಯಕರುಗಳು, ಸ್ಥಳೀಯ ಧಾರ್ಮಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಇಹ್ಸಾನ್ ಕರ್ನಾಟಕ  ಎಕ್ಸಿಕ್ಯೂಟಿವ್ ಆಫೀಸರ್ ಅನ್ವರ್ ಅಸದಿ ಈಗಿನ ಸುದ್ದಿಗೆ ತಿಳಿಸಿದ್ದಾರೆ.

Previous Post Next Post