ವಿಧಾನಪರಿಷತ್ ಚುನಾವಣೆ ಫಲಿತಾಂಶ: ಯಾರಿಗೆ ಗೆಲುವು?? ಯಾರಿಗೆ ಸೋಲು?? ಇಲ್ಲಿದೆ ಸಂಪೂರ್ಣ ಮಾಹಿತಿ

ವಿಧಾನಪರಿಷತ್ ಚುನಾವಣೆ ಫಲಿತಾಂಶ: ಯಾರಿಗೆ ಗೆಲುವು?? ಯಾರಿಗೆ ಸೋಲು?? ಇಲ್ಲಿದೆ ಸಂಪೂರ್ಣ ಮಾಹಿತಿ 


ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಂತ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯ ಬಹುತೇಕ ಫಲಿತಾಂಶ ಹೊರ ಬಿದ್ದಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.


ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದಾರೆ.

ಡಿಸೆಂಬರ್ 10, 2021ರಂದು ನಡೆದಂತ 25 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆಯೂ ಪರಿಷತ್ ಕದನದ ಬಿಗ್ ಪೈಟ್ ಫಲಿತಾಂಶ ಹೊರ ಬಿದ್ದಿದ್ದು, ಚುನಾವಣಾ ಆಯೋಗದಿಂದ ಅಧಿಕೃತವಾಗಿ ಘೋಷಣೆ ಮಾಡೋದು ಮಾತ್ರವೇ ಬಾಕಿ ಇದೆ.

ಕುತೂಹಲ ಮೂಡಿಸಿದ್ದಂತ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಡಿ.ಹೆಚ್ ಶಂಕರ್ ಮೂರ್ತಿಯವರ ಪುತ್ರ ಡಿ.ಎಸ್ ಅರುಣ್ ಗೆಲುವು ಸಾಧಿಸಿದ್ದರೇ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾರು ಸೋಲು ಎನ್ನುವ ಬಗ್ಗೆ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.


ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

  • ಮಂಡ್ಯ ಕ್ಷೇತ್ರ - ದಿನೇಶ್ ಗೂಳಿಗೌಡ ಗೆಲುವು
  • ಧಾರವಾಡ - ಗದಗ ಹಾವೇರಿ ಕ್ಷೇತ್ರ - ಸಲೀಂ ಅಹ್ಮದ್ ಗೆಲುವು
  • ರಾಯಚೂರು ಕ್ಷೇತ್ರ - ಶರಣಗೌಡ ಪಾಟೀಲ್ ಗೆಲುವು
  • ಬೀದರ್ ಕ್ಷೇತ್ರ - ಭೀಮರಾವ್ ಪಾಟೀಲ್ ಗೆಲುವು
  • ಬೆಂಗಳೂರು ಗ್ರಾಮಾಂತರ ಕ್ಷೇತ್ರ - ಎಸ್ ರವಿ ಗೆಲುವು
  • ಮೈಸೂರು-ಚಾಮರಾಜನಗರ ಕ್ಷೇತ್ರ - ಡಾ.ಡಿ.ತಿಮ್ಮಯ್ಯ ಗೆಲುವು
  • ಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರ - ಎಂ ಎಲ್ ಅನೀಲ್ ಕುಮಾರ್ ಗೆಲುವು
  • ದಕ್ಷಿಣ ಕನ್ನಡ ಉಡುಪಿ ಕ್ಷೇತ್ರ - ಮಂಜುನಾಥ್ ಬಂಢಾರಿ ಗೆಲುವು
  • ತುಮಕೂರು ಕ್ಷೇತ್ರ - ರಾಜೇಂದ್ರ ಗೆಲುವು
  • ಕೋಲಾರ - ಚಿಕ್ಕಬಳ್ಳಾಪುರ ಕ್ಷೇತ್ರ - ಎಂ ಎಲ್ ಅನೀಲ್ ಕುಮಾರ್ ಗೆಲುವು


ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ದಕ್ಷಿಣ ಕನ್ನಡ - ಉಡುಪಿ ಕ್ಷೇತ್ರದಿಂದ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು
  • ಧಾರವಾಡ ಗದಗ ಹಾವೇರಿ ಕ್ಷೇತ್ರ - ಪ್ರದೀಶ್ ಶೆಟ್ಟರ್ ಗೆಲುವು
  • ಕೊಡಗು ಕ್ಷೇತ್ರ - ಸುಜಾ ಕುಶಾಲಪ್ಪ ಗೆಲುವು
  • ಬೆಂಗಳೂರು ನಗರ ಕ್ಷೇತ್ರ - ಹೆಚ್ ಎಸ್ ಗೋಪಿನಾಥ ರೆಡ್ಡಿ ಗೆಲುವು
  • ಉತ್ತರ ಕನ್ನಡ ಕ್ಷೇತ್ರ - ಗಣಪತಿ ಉಳ್ವೇಕರ್ ಗೆಲುವು
  • ಚಿತ್ರದುರ್ಗ - ದಾವಣಗೆರೆ - ಕೆ ಎಸ್ ನವೀನ್ ಗೆಲುವು
  • ವಿಜಯಪುರ -ಬಾಗಲಕೋಟೆ ಕ್ಷೇತ್ರ - ಪಿ ಹೆಚ್ ಪೂಜಾರ್ ಗೆಲುವು
  • ಚಿಕ್ಕಮಗಳೂರು ಕ್ಷೇತ್ರ - ಎಂ.ಕೆ.ಪ್ರಾಣೇಶ್
  • ಕಲಬುರ್ಗಿ ಕ್ಷೇತ್ರ - ಬಿ.ಜಿ.ಪಾಟೀಲ್ ಗೆಲುವು
  • ಬಳ್ಳಾರಿ ಕ್ಷೇತ್ರ - ವೈ ಎಂ ಸತೀಶ್ ಗೆಲುವು
  • ಶಿವಮೊಗ್ಗ ಕ್ಷೇತ್ರ - ಡಿಎಸ್ ಅರುಣ್ ಗೆಲುವು
  • ಮೈಸೂರು ಕ್ಷೇತ್ರ ಬಾಕಿ

ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

  • ಹಾಸನ ಕ್ಷೇತ್ರ - ಸೂರಜ್ ರೇವಣ್ಣ ಗೆಲುವು

ಬಳ್ಳಾರಿಯಲ್ಲಿ ಕಾಂಗ್ರೆಸ್ ಕೆ ಸಿ ಕೊಂಡಯ್ಯ ಸೋಲು ಕಂಡಿದ್ದರೇ, ಶಿವಮೊಗ್ಗದಲ್ಲಿ ಹಾಲಿ ಎಂ.ಎಲ್.ಸಿ ಪ್ರಸನ್ನ ಕುಮಾರ್ ಸೋಲು ಕಂಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು ಸೋಲು ಕಂಡಿದ್ದಾರೆ.


Read More ಮುಂದೆ ಓದಿ

Previous Post Next Post