ಆಲಪ್ಪುಝದಲ್ಲಿ ಎರಡು ಹತ್ಯೆಗಳು: ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಲಿ: ಸುಲ್ತಾನುಲ್ ಉಲಮಾ ಒತ್ತಾಯ
ಕೋಝಿಕ್ಕೋಡ್: ಆಲಪ್ಪುಝದಲ್ಲಿ ಕೆಲವೇ ಗಂಟೆಗಳಲ್ಲಿ ನಡೆದ ಎರಡು ಕೊಲೆಗಳು ಅತ್ಯಂತ ಖಂಡನೀಯ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸಮಸ್ತ ಕೇರಳ ಸುನ್ನಿ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರು ಹೇಳಿದರು. ಅಲ್ಲದೆ ಈ ಕೃತ್ಯವೆಸಗಿದ ದುಷ್ಕರ್ಮಿಗಳಿಗೆ ಶೀಘ್ರದಲ್ಲೇ ಅರ್ಹ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಕೋಮುವಾದಿ ನಡೆ ಯಾರ ಕೈಯಿಂದಲೂ ಸ್ವೀಕಾರಾರ್ಹವಲ್ಲ. ಅವರು ಕತ್ತಿ ಮಸೆಯುವುದನ್ನು ನಿಲ್ಲಿಸಬೇಕು. ಇವರಿಗೆ ಜನರನ್ನು ಅನ್ಯಾಯವಾಗಿ ಕೊಲ್ಲುವ ಅಧಿಕಾರ ಕೊಟ್ಟವರು ಯಾರು? ಅನಾಥವಾದ ಎರಡು ಕುಟುಂಬವನ್ನು ಸಮಾಧಾನ ಪಡಿಸುವವರು ಯಾರು ? ಕೆಲವು ನಾಯಕರ ಅಪಕ್ವ ಪ್ರಕ್ರಿಯೆಗಳು ಕೂಡ ನೋವುಂಟು ಮಾಡುತ್ತಿದೆ ಎಂದರು.
ಕೇರಳದಲ್ಲಿ ನಡೆಯುತ್ತಿರುವ ಈ ಅಪಾಯಕಾರಿ ಬೆಳವಣಿಗೆಯನ್ನು ತಡೆಯಲು ಸರಕಾರ ಮತ್ತು ರಾಜಕೀಯ ಸಾಮಾಜಿಕ ಮುಖಂಡರು ಗಳು ಒಂದಾಗಿ ಕೆಲಸ ಮಾಡಬೇಕು. ದೇಶದ ಶಾಂತಿ ಕದಡುವವರ ವಿರುದ್ಧ ಯಾವುದೇ ರಾಜಕೀಯ ಪಕ್ಷ ಭೇದವಿಲ್ಲದೆ ಕ್ರಮ ಕೈಗೊಳ್ಳಬೇಕು. ಇಂತಹ ಅಪರಾಧಗಳ ವಿರುದ್ಧ ಕಾನೂನು ಪರಿಪಾಲಕರು ಸಂಪೂರ್ಣ ಜಾಗರೂಕರಾಗಿರಬೇಕು ಎಂದು ಸುಲ್ತಾನುಲ್ ಉಲಮಾ ಆಗ್ರಹಿಸಿದ್ದಾರೆ.