ಐ ಏ ಎಫ್ ಹೆಲಿಕಾಪ್ಟರ್ ಪತನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಚಿಕಿತ್ಸೆ ಫಲಿಸದೆ ವೀರ ಮೃತ್ಯು
ಹೊಸದಿಲ್ಲಿ: ತಮಿಳುನಾಡಿನ ಕೂನೂರ್ ಸಮೀಪ ಬುಧವಾರ ನಡೆದ ಭಾರತೀಯ ವಾಯು ಪಡೆಯ(ಐಎಎಫ್) ಹೆಲಿಕಾಪ್ಟರ್ ಪತನ ದುರಂತದಲ್ಲಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ವೆಲ್ಲಿಂಗ್ಟನ್ ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ ಎಂದು ಟ್ವಿಟರ್ ನಲ್ಲಿ ವಾಯುಪಡೆಯು ಅಧಿಕೃತ ಮಾಹಿತಿ ನೀಡಿದೆ.
ಹೆಲಿಕಾಪ್ಟರ್ ನಲ್ಲಿ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸಹಿತ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. 14 ಜನರ ಪೈಕಿ 13 ಮಂದಿ ಸಾವನ್ನಪ್ಪಿರುವುದು ಈಗಾಗಲೇ ದೃಢಪಟ್ಟಿದ್ದು ಮೃತದೇಹಗಳ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಖಚಿತಪಡಿಸಲಾಗುವುದು ಎಂದು ANI ವರದಿ ಮಾಡಿದೆ.