ಶಾಂತಿಯ ಹರಿಕಾರ, ಸುನ್ನಿ ಜನಕೋಟಿಗಳ ಅದ್ವಿತೀಯ ನಾಯಕ ಸುಲ್ತಾನುಲ್ ಉಲಮಾ ಇಂದು ಮಂಗಳೂರಿಗೆ
ಇಂದು ಮಧ್ಯಾಹ್ನ ಮೂರು ಗಂಟೆಗೆ ಮರ್ಕಝುಲ್ ಇಸ್ಲಾಮೀ ಅಡ್ಯಾರ್ ಕಣ್ಣೂರಿನಲ್ಲಿ ಸುನ್ನೀ ಕೋ ಆರ್ಡಿನೇಶನ್ ವ್ಯಾಪ್ತಿಯ ಸಂಘಟನೆಗಳ ಸಮಾವೇಶ ನಡೆಯಲಿದ್ದು ವಿಶೇಷ ಉಪಸ್ಥಿತಿಯನ್ನು ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ವಹಿಸಲಿದ್ದಾರೆ. ಸುನ್ನೀ ಕೋ ಆರ್ಡಿನೇಶನ್ ವ್ಯಾಪ್ತಿಯ ಸಂಘಟನೆಗಳ ರಾಜ್ಯ ಕಾರ್ಯಕಾರಿ ಸದಸ್ಯರು ಮಾತ್ರ ಈ ಸಭೆಯಲ್ಲಿ ಭಾಗವಹಿಸುವುದು ಎಂದು ಜಮ್ಯಿಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.